ಕೈ ಪಕ್ಷದ ಪ್ರಚಾರದಲ್ಲಿ 40 ಜನ ಸ್ಟಾರ್ ಕ್ಯಾಂಪೇನರ್ ಗಳು..!

ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸೆಲೆಬ್ರಿಟಿಗಳ ಮೊರೆ ಹೋಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ 40 ಸ್ಟಾರ್ ಕ್ಯಾಂಪೇನರ್ ಗಳನ್ನು ಬಳಸಿಕೊಳ್ಳಲು ಫ್ಲಾನ್ ಮಾಡಿದೆ. ಈ ವಿಚಾರವನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸದ್ಯ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ತಯಾರಿಸುತ್ತಿದ್ದೇವೆ. ಚುನಾವಣಾ ಪ್ರಚಾರದಲ್ಲಿ 40 ಜನ ಸ್ಟಾರ್ ಕ್ಯಾಂಪೇನರ್ ಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಹಿರಿಯ ನಟ ಅಂಬರೀಶ್, ನಟಿ ರಮ್ಯಾ, ಮಾಲಾಶ್ರೀ, ಸಾಧುಕೋಕಿಲಾ, ಮುಖ್ಯಮಂತ್ರಿ ಚಂದ್ರು, ಆಭಿನಯಾ, ಭಾವನಾ ಸೇರಿದಂತೆ ಪ್ರಮುಖರು ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
Comments