ಬೇಲೂರು ಶಾಸಕ ರುದ್ರೇಶ್‌ಗೌಡರ ಮರಣಕ್ಕೆ ಕಂಬನಿ ಮಿಡಿದ ಎಚ್ ಡಿಡಿ

ಹೃದಯಘಾತವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್ ರುದ್ರೇಗೌಡ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶೋಕ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಹೆಚ್.ಡಿ ದೇವೇಗೌಡರು ತಮ್ಮ ಶೋಕ ಸಂದೇಶದಲ್ಲಿ ವೈಎನ್ ರುದ್ರೇಶ್ ಗೌಡ ನಿಧನಕ್ಕೆ ವಿಧಿವಶರಾಗಿರುವ ಸುದ್ದಿಯನ್ನು ತಿಳಿದು ಮನಸ್ಸಿಗೆ ನೋವಾಗಿದೆ. ರಾಜಕೀಯದಲ್ಲಿ ಅಜಾತ ಶತ್ರು, ಸಜ್ಜನ ರಾಜಕಾರಣಿಯಾಗಿದ್ದ ವೈಎನ್ ರುದ್ರೇಶ್ ಗೌಡರ ನಿಧನದಿಂದ ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿ ಯನ್ನು ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಇದೇ ವೇಳೆ ದೇವೇಗೌಡ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ, ಲೋಕಸಭಾ ಸದಸ್ಯರಾಗಿ , ಶಾಸಕರಾಗಿ ಜಿಲ್ಲೆಯಲ್ಲಿ ಉತ್ತಮ ವಾಗ್ಮಿಯಾಗಿದ್ದರು. ಅವರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು ಕೋರುತ್ತೇನೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಂತ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Comments