ಕಾಂಗ್ರೆಸ್ ಶಾಸಕ ವೈ.ಎನ್ ರುದ್ರೇಗೌಡ ಹೃದಯಘಾತದಿಂದ ನಿಧನ

ಶುಕ್ರವಾರ ಹೃದಯಘಾತವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್ ರುದ್ರೇಗೌಡ ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ 63 ವರ್ಷದ ರುದ್ರೇಶ್ ಗೌಡ ನಿನ್ನೆ ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆಬೆಂಗಳೂರಿನಲ್ಲಿ ಹೃದಯಘಾತವಾಗಿತ್ತು. ನಂತರ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ICUನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇದಲ್ಲದೇ ಈ ಮೊದಲು ವೈಎನ್‌ಆರ್ ಅವರ ಆರೋಗ್ಯ ಹದಗೆಟ್ಟಿತ್ತು. ಅವರು ಬಹು ಅಂಗ ವೈಫಲ್ಯದ ತೊಂದರೆ ಎದುರಿಸುತ್ತಿದ್ದರು. ಈ ನಡುವೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
Comments