ಸೋನಿಯ ಗಾಂಧಿ ಆರೋಗ್ಯದಲ್ಲಿ ಅಸ್ತವ್ಯೆಸ್ಥ
ಸೋನಿಯಾ ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿಯೊಂದಿಗೆ ಎರಡು ದಿನಗಳ ಕಾಲ ಶಿಮ್ಲಾ ಪ್ರವಾಸದಲ್ಲಿದ್ದರು. ಆದರೆ, ಕಳೆದ ರಾತ್ರಿ ಶಿಮ್ಲಾದ ಹೋಟೆಲ್‌ನಲ್ಲಿ ತಂಗಿದ್ದಾಗ ಸೋನಿಯಾ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ. ಆಗ ತಕ್ಷಣವೇ ಚಿಕಿತ್ಸೆಗೆಂದು ಅವರನ್ನು ಶಿಮ್ಲಾದಿಂದ ಚಂಡೀಗಢ್‌ನ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ರವಾನಿಸಲಾಗಿದೆ.
ಸೋನಿಯಾರನ್ನು ತಪಾಸಣೆ ನಡೆಸಿದ ಅಲ್ಲಿನ ವೈದ್ಯರು, ದೆಹಲಿಗೆ ಕರೆಕೊಂಡು ಹೋಗವಂತೆ ಸೂಚಿಸಿದ್ದಾರೆ. ಇದರಿಂದ ಅವರನ್ನು ಇಂದು ಬೆಳಗ್ಗೆ ವಿಮಾನದ ಮೂಲಕ ದೆಹಲಿಗೆ ರವಾನಿಸಲಾಗಿದೆ ಎಂದು ಗೊತ್ತಾಗಿದೆ. ಚಂಡೀಗಢ್ ತಲುಪಿದಾಗ ಸೋನಿಯಾ ಅವರ ಆರೋಗ್ಯ ಸ್ಥಿರವಾಗಿತ್ತು ಎಂದು ಹೇಳಲಾಗಿದೆ.
Comments