ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಬಗ್ಗೆ ರಾಕಿಂಗ್ ಸ್ಟಾರ್ ಏನಂದ್ರು...?

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಸಿನಿಮಾ ಕಲಾವಿದರಿಗೂ ಬಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಲ್ಲದೆ ಅನೇಕ ಸೆಲಬ್ರೆಟಿಗಳು ರಾಜಕೀಯ ಪಕ್ಷದ ಕಡೆ ಪ್ರಚಾರಕ್ಕಿಳಿದಿರುವುದು ಅಚ್ಚರಿಯ ಸಂಗತಿ.
ಇನ್ನು ಯಶೋಮಾರ್ಗ ಸಂಸ್ಥೆ ಆರಂಭ ಮಾಡಿ ಜನರ ಸೇವೆಗೆ ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಈ ಚುನಾವಣೆಯಲ್ಲಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸಾಕಷ್ಟು ಪೊಲಿಟಿಕಲ್ ಲೀಡರ್ ಗಳ ಸ್ನೇಹ ಹೊಂದಿರುವ ಯಶ್ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲವಂತೆ. ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರ ದ ಮುಹೂರ್ತ ದ ಸಂದರ್ಭದಲ್ಲಿ ಭಾಗಿ ಆಗಿದ್ದ ಯಶ್ 'ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗಿತ್ತಿಲ್ಲ.
ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು, ಇಲ್ಲವೇ ನನಗೆ ಅಂತವರ ಬಗ್ಗೆ ಗೋತ್ತಿರಬೇಕು. ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ.ಪಕ್ಷದ ಪ್ರಚಾರಕ್ಕೆ ಹೋಗುವುದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ'. ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಒಟ್ಟಾರೆ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳ ಮಧ್ಯೆ ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ ಎಂದು ಯಶ್ ನೇರವಾಗಿ ಹೇಳಿದ್ದಾರೆ.
Comments