ಕರಿಂಜ ಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಅಭಯಚಂದ್ರ
ಒಬ್ಬ ರಾಕ್ಷಸ ಮುಖ್ಯಮಂತ್ರಿ ಮತ್ತು ರಾಕ್ಷಸ ಶಾಸಕ ಇದ್ದಾರೆ ಅಂತ ಕರಿಂಜ ಸ್ವಾಮಿ ಯವರು ಹೇಳಿರುವ ಮಾತಿಗೆ ಶಾಸಕ ಅಭಯ ಚಂದ್ರ ಜೈನ್ ರವರು ಯಾವ ಸ್ವಾಮೀಜಿಯೇ ಆಗಲಿ ಸಿಎಂ ಬಗ್ಗೆ ಮಾತಾಡಿದ್ರೆ ಸುಮ್ಮನೆ ಬಿಡಲ್ಲ. ಅಂತವರ ವಿರುದ್ಧ ಕಪ್ಪು ಬಾವುಟ ಹಿಡಿಯುವ ಕೆಲಸ ಮಾಡಬೇಕು.ಅವನು ಕಾನಾ ಸಿಗಬಾರದು, ಹಾಗೆ ಮಾಡಬೇಕೆಂದು ಧಮ್ಕಿ ಹಾಕಿದ್ದಾರೆ.
ತುಳು ಭಾಷೆಯಲ್ಲಿ ಮಾತನಾಡುತ್ತ ಸ್ವಾಮೀಜಿಯ ವಿರುದ್ಧ ಕಿಡಿ ಕಾರಿದ್ದಾರೆ. ಇದಕ್ಕೆ ಕಾರಣವೇನೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗು ಆದೇ ಕ್ಷೇತ್ರದ ಶಾಸಕರಾದ ಅಭಯ ಚಂದ್ರ ಜೈನ್ ರವರನ್ನು ಛೇಡಿಸುವ ಥೇಟಿನಲ್ಲಿ ಮಾತನಾಡಿರುವುದು ಇಷ್ಟೆಲ್ಲದಕ್ಕೂ ಕಾರಣವಾಗಿದೆ. ಇದೆ ಕಾರಣಕ್ಕೆ ಶಾಸಕ ಅಭಯ ಚಂದ್ರ ಜೈನ್ ರವರು ಸ್ವಾಮೀಜಿಯವರು ಸರ್ಕಾರದ ಭೂಮಿಯನ್ನು ಕಬಳಿಸಿದ್ದಾರೆ. ಇದನ್ನು ನಾನು ಬಿಡುವುದಿಲ್ಲ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇನೆ ಎಂದು ಕಿಡಿ ಕಾರಿದ್ದಾರೆ.
Comments