ಫುಲ್ ವೈರಲ್ ಆಗಿದೆ ಸಿಎಂ ಸಿದ್ದರಾಮಯ್ಯನವರ ಡ್ಯಾನ್ಸ್
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯನವರು ಡಾನ್ಸ್ ಮಾಡಿರುವ ವಿಡಿಯೋ ಒಂದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋ ದಲ್ಲಿ ಸಿಎಂ ಸಿದ್ದರಾಮಯ್ಯ ನವರು ಡಾನ್ಸ್ ಮಾಡುತ್ತಿದ್ದಾರೆ ಎಂದು ಹಲವಾರು ಕಾಮೆಂಟ್ ಸಹ ಮಾಡಿದ್ದರು.
ಚೌಕ ಚಿತ್ರದ ಬಹು ಜನಪ್ರಿಯ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡ್ಯಾನ್ಸ್ ಮಾಡುತ್ತಿದ್ದಾರೆ ನೋಡಿ ಎಂಬ ಅಡಿಬರಹವುಳ್ಳ ವಿಡಿಯೋ ಫೇಸ್ ಬುಕ್ ನಲ್ಲಿ ಸಕತ್ ವೈರಲ್ ಆಗುತ್ತಿದೆ. ಬಿಜೆಪಿ ಬೆಂಬಲಿಗರು ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೆಚ್ಚೆಚ್ಚು ಬಾರಿ ಹಂಚಿಕೊಂಡಿದ್ದಾರೆ. ಈ ಮೂಲಕ ಈ ಹಾಡಿನಲ್ಲಿ ನರ್ತಿಸಿರುವ ರೈತನೊಬ್ಬನಿಗೆ ಅವಮಾನ ಮಾಡಿದ್ದಾರೆ ಎಂದು ಈ ವಿಡಿಯೋವನ್ನು ಲೈವ್ ಮಾಡಿದ್ದ ಅಣೆಕಟ್ಟೆ ವಿಶ್ವನಾಥ್ ಅವರು ಹೇಳಿದ್ದಾರೆ.
ಈ ವಿಡಿಯೋವನ್ನು ಚಿತ್ರೀಕರಿಸಿದ್ದ ಅಣೆಕಟ್ಟೆ ವಿಶ್ವನಾಥ್ ಅವರು ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿ ಭಕ್ತರಿಂದ ರೈತರಿಗೆ ಅವಮಾನ. ಈ ಬಿಜೆಪಿ ಭಕ್ತರು ಹೇಳುವ ಹಸಿ ಸುಳ್ಳಿಗೆ ಇದೊಂದು ಸ್ಪಷ್ಟ ಉದಾಹರಣೆ. ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೋಲುವ ರೈತರೊಬ್ಬರು ನೃತ್ಯಮಾಡಿದ್ದರು. ನಾನದನ್ನ ಲೈವ್ ಮಾಡಿದ್ದೆ. ಇದನ್ನು ಕದ್ದು ಶಿರಸಿ ಅನಂತನ ಭಕ್ತರು ತಮ್ಮ ಪೇಜ್ ನಲ್ಲಿ ಸಿದ್ಧ ರಾಮಯ್ಯನವರು ನೃತ್ಯ ಮಾಡಿದ್ದಾರೆ ಎಂದು ಅಪ ಪ್ರಚಾರ ಮಾಡಿದ್ದಾರೆ. ಆ ರೈತರ ಜೀವನೋತ್ಸಾಹ ನೋಡಿ ನಾನು ಇದಕ್ಕೆ ಕುಣಿದಿದ್ದೆ. ಬಿಜೆಪಿ ಅಂದರೆ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ.- ಎಂದು ಬರೆದುಕೊಂಡಿದ್ದಾರೆ
Comments