ಜೆಡಿಎಸ್ ಬಂಡಾಯ ಶಾಸಕರನ್ನು ಪೀಕಲಾಟಕ್ಕೆ ಸಿಲುಕಿಸಿದ ದೇವೇಗೌಡರ ಈ ನಿರ್ಧಾರ

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದಿಂದ ಜಾರಿಗೊಳಿಸುವ ವಿಪ್ ಬಂಡಾಯ ಶಾಸಕರಿಗೂ ಅನ್ವಯವಾಗಲಿದೆ. ಅವರೂ ಅದನ್ನು ಪಾಲಿಸಬೇಕಾಗಿರುವುದರಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಹಾಕಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಬಿ.ಎಂ.ಫಾರೂಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲಲು ಅಗತ್ಯವಾದ ಮತಗಳ ಪಡೆಯಲು , ಪಕ್ಷೇತರ ಶಾಸಕರ ಬೆಂಬಲವನ್ನೂ ಕೋರಲಾಗುವುದು. ಕಳೆದ ಬಾರಿಯಂತೆ ಆಗದೆ ಪಕ್ಷೇತರರು ನಮಗೆ ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಜತೆಗೆ ಏಳು ಮಂದಿ ಬಂಡಾಯ ಶಾಸಕರಿಗೂ ಸಹ ವಿಪ್ ಅನ್ವಯವಾಗಲಿದೆ. ಅವರನ್ನು ಪಕ್ಷದಿಂದ ಈವರೆಗೆ ಉಚ್ಚಾಟನೆ ಮಾಡಿಲ್ಲ. ಜತೆಗೆ ಅವರು ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಈಗಲೂ ಸಹ ಅವರು ಜಾತ್ಯತೀತ ಜನತಾದಳದ ಸದಸ್ಯರಾಗಿಯೇ ಇದ್ದಾರೆ. ಅವರನ್ನು ವಿಪ್ ವ್ಯಾಪ್ತಿಗೆ ತಂದು ನೋಟಿಸ್ ನೀಡಲಾಗುವುದು. ಸ್ಪೀಕರ್ ಅವರು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು
Comments