ರಾಜಕೀಯ ಅಖಾಡಕ್ಕಿಳಿಯಲಿದ್ದಾರಾ ಪ್ರಿಯಾಂಕಾ ಗಾಂಧಿ...?
ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯದಲ್ಲಿ ರಾಜಕೀಯ ರಂಗೇರುತ್ತಿದೆ. ಪ್ರತಿಪಕ್ಷಗಳನ್ನು ಮಣಿಸಲು ನಾನಾ ರೀತಿಯ ತಂತ್ರಗಳನ್ನು ರೂಪಿಸುವತ್ತ ಹೆಜ್ಜೆ ಹಾಕಿವೆ. ಹೌದು ಇತ್ತೀಚಿಗೆ ಬಿಜೆಪಿ ವಿರುದ್ಧ ಟ್ವಿಟ್ ಮಾಡಿರುವ ಪ್ರಿಯಾಂಕ ಗಾಂಧಿ, ತಮ್ಮ ಟ್ವಿಟ್ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಮೊನ್ನೆ ಮೊನ್ನೆ ಈಶಾನ್ಯ ರಾಜ್ಯದಲ್ಲೂ ಕಾಂಗ್ರೆಸ್ ಸೋಲು ಅನುಭವಿಸಿದಾಗ, ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿದರೆನೇ, ಕಾಂಗ್ರೆಸ್ ಒಂದು ದಾರಿಗೆ ಬರಲು ಸಾಧ್ಯ ಎನ್ನುವ ಹಿಂದಿನ ಮಾತು ಏನಿತ್ತೋ ಅದು ಮತ್ತೆ ಚಾಲನೆಗೆ ಬಂದಿತ್ತು. ಅಷ್ಟು ಸಾಲದು ಎಂಬಂತೆ ಬಿಜೆಪಿಯವರು ರಾಹುಲ್ ಗಾಂಧಿ ಹೋದಲೆಲ್ಲಾ ಸೋಲು ಕಟ್ಟಿಟ್ಟ ಬುತ್ತಿ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಆದರೆ ಪ್ರಿಯಾಂಕ ಗಾಂಧಿಯವರು ಚುನಾವಣಾ ಅಖಾಡಕ್ಕಿಳಿದರೆ ಬಿಜೆಪಿ ಯವರಿಗೆ ಪ್ರಿಯಾಂಕ ಗಾಂಧಿ ಬಲಿಷ್ಠ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಅಜ್ಜಿ ಇಂದಿರಾ ಗಾಂಧಿಯನ್ನು ಹೋಲುವ ಪ್ರಿಯಾಂಕ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಾಯಿ (ಸೋನಿಯಾ ಗಾಂಧಿ, ರಾಯ್ ಬರೇಲಿ) ಮತ್ತು ಸಹೋದರನ (ರಾಹುಲ್ ಗಾಂಧಿ, ಅಮೇಠಿ) ಪರವಾಗಿ ಪ್ರಚಾರ ಮಾಡಿದ್ದನ್ನು ಬಿಟ್ಟರೆ, ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿರಲಿಲ್ಲ. ಅಲ್ಲದೆ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡು ಬಿಜೆಪಿಯವರ ಕಾರ್ಯ ವೈಖರಿಯ ಬಗ್ಗೆ ತಮ್ಮ ಟ್ವಿಟ್ ನಲ್ಲಿ ತಿಳಿಸಿದ್ದಾರೆ.
ಚುನಾವಣೆ ಹತ್ತಿರಬರುತ್ತಿರುವುದರಿಂದ ಮತ್ತು ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದಿಲ್ಲವೋ ಅಲ್ಲಿ ಹಿಂದೂಗಳಿಗೆ ಭಯವಂತೆ. ತಮ್ಮ ಸಿದ್ದಾಂತಗಳಿಗೆ ವಿರುದ್ದವಾದ ಪಕ್ಷದ ಜೊತೆ ಕಾಶ್ಮೀರದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ರಾಮರಾಜ್ಯ ಅಷ್ಟೇ.. ನಾಚಿಕೆಯಾಗಬೇಕು ಎನ್ನುವ ಟ್ವೀಟ್. ಜಿಹಾದಿ ಮುಕ್ತ ಕರ್ನಾಟಕ ಎನ್ನುವ ಹ್ಯಾಷ್ ಟ್ಯಾಗಿಗೆ ಈ ರೀತಿಯ ಪ್ರತ್ಯುತ್ತರ ಪ್ರಿಯಾಂಕ ಅವರಿಂದ ಬಂದಿತ್ತು. ವಿದ್ಯಾಭ್ಯಾಸ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿದೆ, ಇದು ಇಂದಿನ ಮಕ್ಕಳಿಗೆ ಬಿಜೆಪಿ ಕಲಿಸುತ್ತಿರುವ ಪಾಠ! ಭಾರತೀಯರು ಭಾರತೀಯರಲ್ಲಿ ಮನುಷ್ಯರನ್ನು ನೋಡುತ್ತಾರೆ. ಇದನ್ನು ಅವರು ತಮ್ಮ ಸ್ವಂತ ಕಣ್ಣುಗಳೊಂದಿಗೆ ವೀಕ್ಷಿಸಬಹುದು. ಸಿ ಫಾರ್ ಚೋರ್, ಚಾಚಾ ನೆಹರೂ ಎಂದು ಜಾರ್ಖಂಡ್ ರಾಜ್ಯದ ಹಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡಲಾಗುತ್ತಿತ್ತು ಎನ್ನುವ ಸುದ್ದಿಗೆ ಪ್ರಿಯಾಂಕ ನೀಡಿರುವ ಉತ್ತರ.ಇವೆಲ್ಲ ಟ್ವಿಟ್ ಗಳನ್ನೂ ನೋಡಿದರೆ ಪ್ರಿಯಾಂಕ ಗಾಂಧಿಯವರು ಕಾಂಗ್ರೆಸ್ ನಲ್ಲಿ ಪ್ರಬಲ ಅಭ್ಯರ್ಥಿ ಯಾಗುವುದರಲ್ಲಿ ಎರಡುಮಾತಿಲ್ಲ.
Comments