ನೀರಿಗಾಗಿ ಗುಳೆ ಹೋರಾಟ ಕೈ ಶಾಸಕನ ಕ್ಷೇತ್ರದ ಜನ್ರು!
ಹಾಸನದ ಬೇಲೂರು ತಾ. ಬೋವಿ ಕಾಲೋನಿಯಲ್ಲಿ ನೀರಿಲ್ಲದೆ ಜನರು ಪರಿತಪಿಸುವ ದುಸ್ಥಿತಿ ಎದುರಾಗಿದೆ. ಇಲ್ಲಿನ ಜನರು ಒಂದು ಬಿಂದಿಗೆ ನೀರಿಗಾಗಿ ಮೂರರಿಂದ ನಾಲ್ಕು ದಿನಗಳು ಕಾಯುವ ಪರಿಸ್ಥಿತಿ ಎದುರಾಗಿದೆ.
ಹಾಸನದ ಬೇಲೂರು ತಾ. ಬೋವಿ ಕಾಲೋನಿಯಲ್ಲಿ ನೀರಿಗಾಗಿ ಜನರು ಪರಿತಪಿಸುವ ದುಸ್ಥಿತಿ ಎದುರಾಗಿದೆ. ಇಲ್ಲಿನ ಜನರು ಒಂದು ಬಿಂದಿಗೆ ನೀರಿಗಾಗಿ ಮೂರರಿಂದ ನಾಲ್ಕು ದಿನಗಳು ಕಾಯುವ ಪರಿಸ್ಥಿತಿ ಕಂಡು ಬಂದಿದೆ. ಅಲ್ಲದೆ ನೀರಿಗಾಗಿ ಬೇರೋಂದು ಕಡೆ ಗುಳೆ ಹೊರಟ್ಟಿದ್ದಾರೆ. ಕುಡಿಯುವ ನೀರಿಗಾಗಿ ಸುಮಾರು ೩ ರಿಂದ ೪ ಕಿಲೋಮೀಟರ್ ಗಳಷ್ಟು ಹೋಗುವ ಪರಿಸ್ಥಿತಿ ಎದುರಾಗಿದೆ. ತಮ್ಮ ದಿನ ನಿತ್ಯದ ಕಾರ್ಯಗಳಿಗೆ ಈ ಜನರು ಹತ್ತಿರದಲ್ಲಿರುವ ಹೊಂಡದಲ್ಲಿನ ನೀರನ್ನೇ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಜನ ಪ್ರತಿನಿಧಿಗಳು ತಮ್ಮ ಬೆಲೆ ಬೇಯಿಸಿಕೊಳ್ಳಲು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಒಂದು ಅಥವಾ ಎರಡು ಟ್ಯಾಂಕರು ನೀರನ್ನು ನೀಡುತ್ತಾರೆ, ಚುನಾವಣೆ ಮುಗಿದ ಮೇಲೆ ಇತ್ತ ಕಡೆ ತಲೆ ಹಾಕಿಯೂ ನೋಡೋದಿಲ್ಲ ಈ ಗ್ರಾಮದ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇವರ ಸಂಕಷ್ಟಗಳಿಗೆ ಸ್ಪಂದಿಸದದಿರುವ ಸರ್ಕಾರದ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments