ಬಿಟ್ಟಿಯಾಗಿ ದುಡಿಸಿಕೊಂಡು ಕೈ ಕೊಟ್ಟ ಕಾಂಗ್ರೆಸ್ ಹಿರಿಯ ಮುಖಂಡ

ಕೇಂದ್ರದ ಮಾಜಿ ಕಾರ್ಮಿಕ ಸಚಿವರಿಂದ ಕಾರ್ಮಿಕನಿಗೆ ಅನ್ಯಾಯವಾಗಿರುವಂತಹ ಘಟನೆ ಇದೀಗ ಬೆಳಕಿಗೆ ಬಂದಿದೆ. ಸೋನಿಯಾ ಗಾಂಧಿ ಮಾತಿಗೂ ಕ್ಯಾರೇ ಎನ್ನಲಿಲ್ಲ ಕಾಂಗ್ರೆಸ್ ಹಿರಿಯ ಮುಖಂಡ. ಬಿಟ್ಟಿಯಾಗಿ ದಶಕಗಳ ಕಾಲ ಕೆಲಸ ಮಾಡಿದ್ರೂಸಂಬಳ ಕೊಡದಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್.
ಇತ ಸೋನಿಯಾ ಗಾಂಧಿಯವರ ಆಪ್ತ, ಕೇಂದ್ರದ ಮಾಜಿ ಸಚಿವರು ಆಗಿರುವ ಆಸ್ಕರ್ ಫರ್ನಾಂಡಿಸ್ ಗೋಪಾಲ ಪೂಜಾರಿ ಯವರ ಬಳಿ ಕೆಲಸ ಮಾಡಿಸಿಕೊಂಡು ಸಂಬಳ ನೀಡದಿರುವ ಬಗ್ಗೆ ಸಿಎಂ ಮನೆ ಎದುರು ಈ ದಂಪತಿ ಮನವಿ ಮಾಡಲು ಅಲೆದಾಡುತ್ತಿದ್ದಾರೆ ಸೋನಿಯಾ ಗಾಂಧಿ ಯವರು ಗೋಪಾಲ ಪೂಜಾರಿಯವರಿಗೆ ಸಂಬಳ ನೀಡುವಂತೆ ಆಸ್ಕರ್ ಫರ್ನಾಂಡಿಸ್ ರವರಿಗೆ ಆಜ್ಞೆ ನೀಡಿದ್ದರು ಸಹ ಯಾವುದೇ ಸಂಬಳ ದೊರೆತಿಲ್ಲ. ಈ ಬಗ್ಗೆ ಹೊರಗಡೆ ಮಾತನಾಡಿದರೆ ಪಕ್ಷ ಹೆಸರು ಹಾಳಾಗುತ್ತದೆಎಂದು ಸುಮ್ಮನಿದ್ದ ಗೋಪಾಲ ಪೂಜಾರಿಯವರು, ತಮ್ಮ ಮಗಳ ಮದ್ವೆಯ ಸಂದರ್ಭದಲ್ಲೂ ಸಂಬಳ ದೊರೆಯದೆ ಸಾಲ ಮಾಡಿ ಮದುವೆ ಮಾಡಿರುವ ಬಗ್ಗೆ ಬೇಸರ ವ್ಯೆಕ್ತಪಡಿಸಿದ್ದಾರೆ. ಕೊನೆಗೆ ಸಾಲ ಹಿಂದಿರುಗಿಸಲು ಹಣವಿಲ್ಲದೆ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
1972ರಿಂದ ಈ ವರೆಗೆ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಬೇರೆ ವಿಧಿಯಿಲ್ಲದೆ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಲ್ಲದೆ, ಸಿಎಂ ಗೆ ಪತ್ರ ಬರೆದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ಕಾರ್ಮಿಕ ಇಲಾಖೆ ತುಂಬಾ ಹಳೆಯ ವರ್ಷಗಳ ಸಂಬಳ ಕೇಳುತ್ತಿದ್ದೀರಾ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕೈ ತೊಳೆದುಕೊಂಡಿದೆ. ಇತ್ತ ಸಿದ್ದರಾಮಯ್ಯನವರ ಕಡೆಯಿಂದಲೂ ಸಹ ಯಾವುದೇ ಸಂದಾಗ್ ದೊರೆತಿಲ್ಲ.ಕರಾವಳಿಯಲ್ಲಿ ಆಸ್ಕರ್ ರವರೊಂದಿಗೆ ಕಾಂಗ್ರೆಸ್ ಪಕ್ಷ ಕಟ್ಟಲು 45 ವರ್ಷ ದುಡಿದ್ದಿದ್ದೇನೆ. ನನಗೆ ಯಾವುದೇ ಸ್ಥಾನಮಾನಗಳು ಬೇಡ ನನ್ನ ಸಂಬಳ ಕೊಡಿಸಿ ಎಂದು ಗೋಪಾಲ ಪೂಜಾರಿಯವರು ತಮ್ಮ ಅಳಲು ವ್ಯೆಕ್ತ ಪಡಿಸಿದ್ದಾರೆ.
Comments