ರಾಜ್ಯದಲ್ಲಿ ರಾರಾಜಿಸಲಿರುವ ನೂತನ ನಾಡದ್ವಜ

ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ನಾಡಧ್ವಜದ ಕುರಿತು ಕನ್ನಡ ಸಂಘಟನೆಗಳ ಮುಖಂಡರ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಸಾಹಿತಿಗಳು, ಹೋರಾಟಗಾರರು ಸಮ್ಮತಿ ಸೂಚಿಸಿದರು.
3 ಬಣ್ಣದ ನಡುವೆ ಸರಕಾರದ ಲಾಂಛನ ನಾಡಧ್ವಜದಲ್ಲಿ ಇರಲಿದೆ. ಹಳದಿ, ಬಿಳಿ ಹಾಗೂ ಕೆಂಪು ಬಣ್ಣದ ಮಧ್ಯೆ ಸರಕಾರದ ಲಾಂಛನ ಇದ್ದ ನಾಡಧ್ವಜವನ್ನು ಸಿಎಂ ಪ್ರದರ್ಶಿಸಿದರು. ನಾಡಧ್ವಜ ಘೋಷಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ, ಕೂಡಲೇ ನಾಡಧ್ವಜ ವಿನ್ಯಾಸ ಮತ್ತು ವಿವರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆಯಲು ಸಂವಿಧಾನದಲ್ಲಿ ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಾಹಿತಿ ಹಂಪನಾಗರಾಜಯ್ಯ ಅವರು ತ್ರಿವರ್ಣ ಬಣ್ಣದ ನಾಡಧ್ವಜವನ್ನು ವಿನ್ಯಾಸ ರಚಿಸಿದ್ದರು. ಗುರುವಾರ ನಾಡಧ್ವಜ ವಿನ್ಯಾಸವನ್ನು ರಾಜ್ಯ ಸಂಪುಟ ಸಭೆಗೆ ಹಸ್ತಾಂತರಿಸಿದ್ದರು.
Comments