ಕಾಂಗ್ರೆಸ್ ನಾಶಕ್ಕೆ ಎಚ್ಚರಿಕೆ ಘಂಟೆ ಭಾರಿಸಿದ ಕುಮಾರಣ್ಣ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷ ಪಕ್ಷಗಳ ನಡುವೆ ಪೈಪೋಟಿ ನಡೆಯುವುಸ್ ಸಾಮಾನ್ಯವೇ ಸರಿ ಆದರೆ ಕಾಂಗ್ರೆಸ್ ಪ್ರತಿ ಭಾರಿಯೂ ಜೆಡಿಎಸ್ ನ್ನು ಅಣಕಿಸುತ್ತಾ ಬಂದಿದೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಿರದಿದ್ದರು ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಮಾತ್ರ ಬಿಟ್ಟಿಲ್ಲ
ಆದರೆ ಜೆಡಿಎಸ್ ಕಾಂಗ್ರೆಸ್ ನ ಈ ದೂರದಾಡಳಿತಕ್ಕೆ ಬ್ರೇಕ್ ಹಾಕಲಿದೆ. ಹೌದು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ದೇಶದ ಒಂದು ಕಡೆ ಇರುವ ನೆಲೆಯೂ ಸರ್ವನಾಶ ಆದೀತು ಎಂದು ಕಾಂಗ್ರೆಸ್ ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆಯ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ. ಹೊಂದಾಣಿಕೆ ಮಾಡಿ ಎಂದು ನಾವೇನು ಅರ್ಜಿ ಹಾಕಿದ್ದೇವೆಯೇ? ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ನಮ್ಮ ಬಳಿ ಅರ್ಜಿ ಹಾಕಿ ಬಂದವರು ನೀವು. ನಾವು ನಿಮ್ಮ ಮನೆ ಬಾಗಿಲಿಗೆ ಎಂದೂ ಬಂದಿಲ್ಲ. ಆದರೆ ನಿಮಗೆ ಕಷ್ಟಆದಾಗ ನಮ್ಮನೆ ಬಾಗಿಲಿಗೆ ಬಂದಿದ್ದೀರಿ. ಚುನಾವಣೆ ಎದುರಿಸುವ ಸಂಪೂರ್ಣ ಶಕ್ತಿ ಜೆಡಿಎಸ್ಗೆ ಇದೆ. ಸಿಎಂಗೆ ಅಧಿಕಾರದ ಮದ ಏರಿದೆ. ಬನ್ನಿ ಚುನಾವಣೆಗೆ, ನಾವು ಏನೂಂತ ತೋರಿಸ್ತೀವಿ ಎಂದು ಸವಾಲು ಹಾಕಿದರು.
Comments