ಕೆಪಿಜೆಪಿ ಗೆ ಗುಡ್ ಬೈ,ಪ್ರಜಾಕೀಯಕ್ಕೆ ಹಾಯ್ ಹಾಯ್

ಕೆಪಿಜೆಪಿ ಪಕ್ಷದಲ್ಲಿನ ಭಿನ್ನಮತ ಉಂಟಾಗಿ ಉಪೇಂದ್ರರವರು ಹಾಗು ಮಹೇಶ್ ಗೌಡ ರವರು ಇಂದು ಸಭೆ ನಡೆಸಿದ ಬಳಿಕ ಮಾತನಾಡಿದ ಉಪ್ಪಿ ಕೆಪಿಜೆಪಿ ಪಕ್ಷವನ್ನು ತೊರೆದು ತಮ್ಮದೇ ಸ್ವಂತ ಪಕ್ಷವನ್ನು ಸ್ಥಾಪಿಸಲಿದ್ದಾರಂತೆ, ಪ್ರಜಾಕೀಯ ಎಂಬ ಪಕ್ಷ ರಚಿಸುವತ್ತ ಮುಖ ಮಾಡಿರುವ ಉಪ್ಪಿ.
ಮಹೇಶ್ ಗೌಡ ಅವರೇ ನಮ್ಮ ಸಿದ್ಧಾಂತ ನಂಬಿ ಬಂದರು. ನನ್ನ ಪ್ರೆಸಿಡೆಂಟ್ ಮಾಡಿದರು, ಈಗ ಇನ್ನೇನು ಪ್ರಚಾರಕ್ಕೆ ಹೊರಡಬೇಕು ಎನ್ನುವಾಗ, ಫಂಡ್ ಕಲೆಕ್ಷನ್ ಬಗ್ಗೆ ಮಾತು ಬಂತು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತು, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಉಪೇಂದ್ರರವರು ಸ್ಪಷ್ಟ ಪಡಿಸಿದರು.ಪ್ರಜಾಕೀಯ ಎಂಬ ಪಕ್ಷ ಸ್ಥಾಪಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಕಾರ್ಪೊರೇಟ್ ಎಲೆಕ್ಷನ್, ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲದರಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ನಮ್ಮ ವಕೀಲರ ಜತೆ ಮಾತನಾಡುತ್ತಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಂತೂ ನಾವೆಲ್ಲ ಸ್ಪರ್ಧಿಸುತ್ತೇವೆ.
ಜನರ ಅಭಿಪ್ರಾಯ ಸಂಗ್ರಹ ಆಧಾರದ ಎಲ್ಲವೂ ನಡೆಯಲಿದೆ. ಇಲ್ಲ ಯಾರೂ ಕಿಂಗ್ ಗಳಿರುವುದಿಲ್ಲ. ಜನಸೇವಕರಿರುತ್ತಾರೆ. ಕಾರ್ಮಿಕರಿರುತ್ತಾರೆ. ರಾಜಕೀಯ ಬೇರೆ, ಪ್ರಜಾಕೀಯ ಬೇರೆ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮಾಡಿಕೊಂಡ ವ್ಯವಸ್ಥೆ. ಇನ್ನೇನು ಪ್ರಚಾರಕ್ಕೆ ಹೊರಡಬೇಕು ಎನ್ನುವಾಗ, ಫಂಡ್ ಕಲೆಕ್ಷನ್ ಬಗ್ಗೆ ಮಾತು ಬಂತು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತು, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿದರು. ''ನಮಗೆ ಕಾರ್ಮಿಕರು ಬೇಕು. ಚುನಾವಣೆಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಸಮೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಉಂಟಾಗುವ ಭೀತಿ ಎದುರಾಯಿತು, ಹೀಗಾಗಿ, 150-200 ಅಭ್ಯರ್ಥಿಗಳ ಹಿತ ಕಾಯಲು ಸೈನಿಂಗ್ ಅಥಾರಿಟಿ ಕೇಳಿದೆ, ಇಂಥವರಿಗಾಗಿ ನಾನು ಡಿಕ್ಟೇಟರ್ ಆಗಲು ಸಿದ್ಧ. ಇದಕ್ಕಾಗಿಯೇ ನಾವು ಹೊಸ ಪಕ್ಷ ಸ್ಥಾಪಿಸಲಿದ್ದೇವೆ ಎಂದರು.
Comments