ಸಿಎಂ ಪುತ್ರನ ಅಧಿಕಾರದ ಕನಸಿಗೆ ಎಳ್ಳು ನೀರು ಬಿಡಲಿರುವ ಜೆಡಿಎಸ್
ಸಿಎಂ ಸ್ವ ಕ್ಷೇತ್ರ ವರುಣಾದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ವರುಣಾ ಕ್ಷೇತ್ರದಲ್ಲಿ ಸಂಭವನೀಯ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಟಾಂಗ್ ನೀಡಲು ಹೊಸ ಅಭ್ಯರ್ಥಿಯನ್ನು ಸಜ್ಜು ಮಾಡಿದೆ.
ಅಭಿಷೇಕ್ ಎನ್ನುವವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.ಈ ಬಗ್ಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಭಿಷೇಕ್ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. 2018ನೇ ಸಾಲಿನ ಚುನಾವಣೆಯಲ್ಲಿ ವರುಣಾದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ 20 ತಿಂಗಳ ಆಡಳಿತ ನನಗೆ ಶ್ರೀ ರಕ್ಷೆಯಾಗಿದೆ. ಇಲ್ಲಿನ ಜನ ನನಗೆ ಆಶಿರ್ವಾದ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
Comments