ಪ್ರಜ್ಞಾವಂತರಾಗಿದ್ದ ರಿಯಲ್ ಸ್ಟಾರ್ ಕಮಲ ಹಿಡಿತಾರಾ...?

ಉಪೇಂದ್ರ ಹಾಗು ಮಹೇಶ್ ಗೌಡರ ನಡುವೆ ಅಭ್ಯರ್ಥಿಗಳ ಆಯ್ಕೆ ಹಾಗೆ ಇನ್ನಿತರ ವಿಷಯಗಳಲ್ಲಿ ಬಿನ್ನಾಭಿಪ್ರಾಯ ಮೂಡಿರುವುದನ್ನು ಕಮಲ ಪಾಳಯ ಸಹ ಬಂಡವಾಳ ಮಾಡಿಕೊಳ್ಳುತ್ತಿದೆ.ಅಷ್ಟಲ್ಲದೇ ಉಪ್ಪಿ ಬಿಜೆಪಿಗೆ ಸೇರುತ್ತಾರೆ ಎನ್ನುವ ವಂದತಿಗಳೂ ಹರಿದಾಡುತ್ತಿವೆ.
ಉಪ್ಪಿ ಬಿಜೆಪಿ ಸೇರ್ಪಡೆ ಬಗ್ಗೆ ಉಡುಪಿಯಲ್ಲಿ ಮಾತನಾಡಿದದ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ, ಬಿಜೆಪಿ ಪಕ್ಷ ಗಂಗೆ ಇದ್ದಂತೆ, ಯಾರಾದರೂ ಬರಬಹುದು. ಸೋನಿಯಾ ಗಾಂಧಿ ಬಂದರೂ ಕರೆದುಕೊಳ್ಳುತ್ತೇವೆ ಎಂದಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ "ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರ ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದರೂ ಇದು ಸ್ವೀಕರಿಸುತ್ತದೆ. ಕರ್ನಾಟಕದ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ.
ಕರುನಾಡಿನಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಯಾವುದೇ ಕಲಾವಿದರು, ಮುಖಂಡರನ್ನು ಸ್ವಾಗತಿಸಲು ಬಿಜೆಪಿ ಸಿದ್ಧವಿದೆ. ಉಪೇಂದ್ರರವರು ಈಗಾಗಲೇ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಅದನ್ನವರು ಮುಂದುವರೆಸುತ್ತಾರೋ ಅಥವಾ ಇದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುತ್ತಾರೋ ಈ ಕುರಿತಾಗಿ ಮಾಹಿತಿ ನನಗೆ ಇಲ್ಲ. ಆದರೆ ಪಕ್ಷಕ್ಕೆ ಯಾರೇ ಬಂದರೂ ನಮ್ಮ ಪಕ್ಷ ತುಂಬು ಹೃದಯದಿಂದ ಸ್ವಾಗತಿಸುತ್ತದೆ" ಎಂದಿದ್ದಾರೆ. ಒಟ್ಟಾರೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸರಗೊಂಡಿರುವ ಉಪೇಂದ್ರ ಕೆಪಿಜೆಪಿಯಲ್ಲಿ ಮುಂದುವರೆಯುತ್ತಾರೋ ಅಥವಾ ಬಿಜೆಪಿ ಸೇರುತ್ತಾರಾ ಎನ್ನುವುದು ಇಂದು ಸ್ಪಷ್ಟವಾಗಲಿದೆ.
Comments