ಬಿಸಿಲಿನ ತಾಪಕ್ಕೆ ಜೆಡಿಎಸ್ ಶಾಸಕನಿಂದ ಹೊಸದೊಂದು ಐಡಿಯಾ..!!
ರಾಜ್ಯದಲ್ಲಿ ಚುನಾವಣಾ ಕಾವು ಒಂದೆಡೆಯಾದರೆ ಮತ್ತೊಂದೆಡೆ ಬಿಸಿಲಿನ ಕಾವು ಹೆಚ್ಚಾಗಿದೆ. ಈ ಬಿಸಿಲಿನ ಕಾವಿಗೆ ಜೆಡಿಎಸ್ ಶಾಸಕ ಕೋನರೆಡ್ಡಿ ಬೇಸಿಗೆ ಬಿಸಿಲನ್ನೇ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಲು ಹೊಸ ತಂತ್ರ ರೂಪಿಸಿದ್ದಾರೆ. ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮುಂತಾದ ಭಾಗ್ಯಗಳನ್ನು ಘೋಷಿಸಿದೆ.
ಇದಕ್ಕೆ ಪರ್ಯಾಯವಾಗಿ ನವಲಗುಂದ ಜೆಡಿಎಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಹೊಸದೊಂದು ಭಾಗ್ಯ ಘೋಷಿಸಿದ್ದಾರೆ. ಅದರ ಹೆಸರು ನೆರಳು ಭಾಗ್ಯ. ನವಲಗುಂದದಲ್ಲಿ ಈ ಬಾರಿ ಭಯಂಕರ ಬಿಸಿಲು. ಭಣಗುಟ್ಟುತ್ತಿರುವ ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ಇದನ್ನು ನೋಡಿದ ಎಂಎಲ್ಎ ಕೋನರೆಡ್ಡಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಅಲ್ಲದೆ ಬೀದಿ ವ್ಯಾಪಾರಿಗಳಿಗೆಂದೇ ದೊಡ್ಡ ದೊಡ್ಡ ಛತ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.
Comments