ಸಿದ್ದರಾಮಯ್ಯನವರ ಯಾವ ಭಾಗ್ಯಗಳಿಂದ ಏನು ಉಪಯೋಗವಾಗಿದೆ?: ಎಚ್ ಡಿಕೆ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ವಿವಿಧ ಭಾಗ್ಯ ಯೋಜನೆಗಳಿಂದ ಜನತೆಗೆ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದ ಕುಮಾರ ಸ್ವಾಮಿ, ಹಸಿವುಮುಕ್ತ ರಾಜ್ಯವಾಗಿದೆಯೇ, 10 ಕೆ.ಜಿ.ಅಕ್ಕಿ ಪಡೆಯಲು ದಿನಗಟ್ಟಲೆ ಸೊಸೈಟಿಗಳ ಮುಂದೆ ಕಾದುಕುಳಿತುಕೊಳ್ಳುವಂತಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಒಬ್ಬ ರೈತರ ಮನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋಗಿ ಸಾಂತ್ವನ ಹೇಳಿಲ್ಲ. ಆದರೆ ನಾನು ಜಿಲ್ಲೆಯ ಎಲ್ಲಾ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವ್ವಾನ ಹೇಳಿದ್ದೇನೆ. ನನಗೆ ನನ್ನ ರೈತರು ಮುಖ್ಯವೇ ಹೊರತು ಅಧಿಕಾರ ಮುಖ್ಯವಲ್ಲ. ರೈತರನ್ನು ಸಾಲಮುಕ್ತನ್ನಾಗಿ ಮಾಡುವುದೇ ನನ್ನ ಮೊದಲ ಆಧ್ಯತೆಯಾಗಿದೆ ಎಂದರು. ರೈತರ ಸಾಲಮನ್ನಾ ಘೋಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 10 ಬಾರಿ ಎಐಸಿಸಿ ನಾಯಕರಾದ ಸೋನಿಯಾಗಾಂಧೀ ಮತ್ತು ರಾಹುಲ್ ಗಾಂಧಿ ಅವರ ಬಳಿಗೆ ಅಲೆದಾಡಿದ್ದಾರೆ. ಇಂತಹ ಹೈಕಮಾಂಡ್ ಸಂಸ್ಕೃತಿಯ ರಾಷ್ಟ್ರೀಯ ಪಕ್ಷಗಳಿಗಿಂತ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ರೈತರ ಹಾಗೂ ಬಡವರ ಪರವಾದ ಸರಕಾರ ನೀಡಲು ನನಗೂ ಒಂದು ಬಾರಿ ಅವಕಾಶ ನೀಡುವಂತೆ ಕೋರಿದರು.
Comments