ಹ್ಯಾರಿಸ್ ಪುತ್ರ ನಲಪಾಡ್ ನ ಹಲ್ಲೆಯನ್ನುಸಮರ್ಥಿಸಿ ಕೊಂಡರಾ ಗೃಹ ಸಚಿವ ರಾಮಲಿಂಗಾರೆಡ್ಡಿ...!

ಇತ್ತೀಚಿಗೆ ಶಾಂತಿನಗರದಲ್ಲಿ ನಡೆದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನ ಮಾರಣಾಂತಿಕ ಹಲ್ಲೆಯ ಬಗ್ಗೆ ಹಾಗೂ ಬಗೆದಷ್ಟು ಬಯಲಾಗುತ್ತಿರುವ ನಲಪಾಡ್ ನ ಕೃತ್ಯಗಳ ಬಗ್ಗೆ ತಿಳಿದ್ದಿದರು ಸಹ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಈ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ, ಆದರೆ ಸಣ್ಣ ಅಪರಾಧಗಳಿಗೆ ರೌಡಿ ಶೀಟರ್ ಎಂಬುದಾಗಿ ಪರಿಗಣಿಸಲಾಗದು ಎಂಬ ಹೇಳಿಕೆಯನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೌಡಿ ಶೀಟರ್ ಎಂದು ಪರಿಗಣಿಸಲು ಹಿಂದೇಟು ಏಕೆ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು‘ಈ ಹಿಂದೆ ನಲಪಾಡ್ ವಿರುದ್ಧ ಯಾರೂ ದೂರು ದಾಖಲಿಸಿರಲಿಲ್ಲ. ದೂರು ದಾಖಲಿಸಿದ್ದರೆ ಕ್ರಮ ಕೈಗೊಳ್ಳುತ್ತಿದ್ದೆವು. ಸಣ್ಣ ತಪ್ಪು ಮಾಡಿದವರ ಮೇಲೆಲ್ಲಾ ರೌಡಿ ಶೀಟರ್ ಹಾಕಲು ಸಾಧ್ಯವಿಲ್ಲ ಎಂದು ನಳಪಾಡ್ ನ ಬೆಂಬಲಿಸಿ ನಿಂತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಣ್ಣ ಅಪರಾಧವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ ಮೇಲೆ ರೌಡಿ ಶೀಟ್ ಹಾಕಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ ಎಂದು ತಮ್ಮ ನಿಲುವನ್ನು ತೋರಿಸಿ ಕೊಟ್ಟರು. ನಲಪಾಡ್ ಬೆದರಿಕೆ ಹಾಕಿದ್ದ, ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಪೂರ್ಣಿಮಾ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ್ದಾರಲ್ಲ’ಎಂಬ ಪ್ರಶ್ನೆಗೆ, ‘ಅವರು ದೂರು ಕೊಡಲು ಹೋದಾಗ ನಾನು ಗೃಹ ಸಚಿವನಲ್ಲ. ನಾನು ಪ್ರತಿನಿಧಿಸುವ ಬಿಟಿಎಂ ಲೇಔಟ್ ಮತ ಕ್ಷೇತ್ರದಲ್ಲಿ ಅವರು ವಾಸಿಸುತ್ತಿದ್ದಾರೆ. ನನ್ನನ್ನು ಭೇಟಿ ಮಾಡಿ ದೂರು ಸಲ್ಲಿಸಲು ಈಗಲೂ ಅವಕಾಶವಿದೆ. ಅವರು ಮೊದಲು ದೂರು ಕೊಡಲಿ, ಎಂದರೆ ವಿನಃ ನಲಪಾಡ್ ತಪ್ಪಿನ ಬಗ್ಗೆ ಅವರಿಗೆ ಮನವರಿಕೆಯೇ ಆಗಲಿಲ್ಲ. ಈ ಎಲ್ಲ ಸೂಚನೆಗಳನ್ನು ನೋಡಿದರೆ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ನಲಪಾಡ್ ನ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ಕನ್ನಡಿಯಲ್ಲಿ ಬೀಳುವ ಬಿಂಬದಂತೆ ಪಾರದರ್ಶಕವಾಗಿ ಕಾಣುತ್ತಿದೆ. ಅಲ್ಲದೆ ಈ ಪ್ರಕರಣದಿಂದ ನಲಪಾಡ್ ನನ್ನು ಬಚಾವ್ ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.
Comments