ಕೂಡ್ಲಿಗಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಲಿರುವ ಜೆಡಿಎಸ್
ಜೆಡಿಎಸ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಅಲ್ಲದೆ ಈ ಬಾರಿ ರಾಷ್ತ್ರೀಯಪಕ್ಷಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ. ಕೂಡ್ಲಿಗಿ ಕ್ಷೇತ್ರದ ಜನತೆಯಾ ಜನ ಮೆಚ್ಚಿದ ನಾಯಕನಾಗಿ ಜೆಡಿಎಸ್ ನ ಎನ್.ಟಿ.ಬೊಮ್ಮಣ್ಣ ರವರು ಹೊರಹೊಮ್ಮಲಿದ್ದಾರೆ.
ಈ ಬಗ್ಗೆ ಮಾತನಾಡಿ ಎನ್.ಟಿ.ಬೊಮ್ಮಣ್ ರವರು ಇಲ್ಲಿಯವರೆಗೂ ಕೂಡ್ಲಿಗಿ ಕ್ಷೇತ್ರದ ಜನತೆ ಹೊರಗಿನವರನ್ನು ಗೆಲ್ಲಿಸಿದ್ದರಿಂದ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ, ಇದು ಜನತೆಗೆ ಗೊತ್ತಿದೆ, ನಾನು ಕೂಡ್ಲಿಗಿ ತಾಲೂಕಿನವನೇ ಆಗಿದ್ದರಿಂದ ನಮ್ಮ ತಾಲೂಕಿನ ಜನಸಾಮಾನ್ಯರ ಸಮಸ್ಯೆಗಳು ಗೊತ್ತು ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 2 ಬಾರಿ ಶಾಸಕನಾಗಿ ಜನತೆಗೆ ಯಾವ ರೀತಿ ಮಾಡಬೇಕೆಂಬ ಅಪಾರ ಅನುಭವ ಇದೆ ಈಗಾಗಿಯೇ ಕೂಡ್ಲಿಗಿ ಕ್ಷೇತ್ರದಲ್ಲಿ ಎನ್.ಟಿ.ಬೊಮ್ಮಣ್ಣ ಶಾಸಕನಾದರೆ ಕೂಡ್ಲಿಗಿ ತಾಲೂಕು ಉದ್ಧಾರವಾಗುತ್ತದೆ ಎಂಬ ತಿಳುವಳಿಕೆ ನಮ್ಮ ಕ್ಷೇತ್ರದ ಜನತೆಗಿದೆ. ಈ ಬಾರಿ ಇಲ್ಲಿಯ ಜನತೆ ಸ್ಥಳೀಯ ನಾಯಕತ್ವ ಬಯಸಿದ್ದಾರೆ. ಹೀಗಾಗಿ ನನಗಿಂತ ಕ್ಷೇತ್ರದ ಎಲ್ಲಾ ಸಮುದಾಯಗಳ ಜನತೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಬಂದ ನನ್ನ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಜೆಡಿಎಸ್ ಪಕ್ಷ ಸಂಘಟನೆ ಮಾಡಲು ಈಗಾಗಲೇ ಮುಂದಾಗಿದ್ದಾರೆ ಬಾರಿ ನನ್ನ ಗೆಲುವು ನಿಶ್ಚಿತ.
Comments