ನಾಳೆ ಮಾಜಿ ಸಿಎಂ ಬಿಎಸ್ ವೈ ಬರ್ತ್ ಡೇ ಗೆ ಸ್ಪೆಷಲ್ ಗಿಫ್ಟ್ ..?

ನಾಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟಿದ ಹಬ್ಬ, ಹಾಗಾಗಿ ಈ ಸಮಾವೇಶಕ್ಕೆ ರೈತ ಬಂಧು ಯಡಿಯೂರಪ್ಪ ಎಂದೇ ಹೆಸರಿಡಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಬಿಎಸ್ ವೈಗೆ ಸಾಂಕೇತಿಕವಾಗಿ ನೇಗಿಲು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇದು ಬಿಜೆಪಿ ಪಕ್ಷದ ಕಡೆಯಿಂದ ಬಿಎಸ್ ವೈ ಗೆ ಭರ್ಜರಿ ಗಿಫ್ಟ್ ಎನ್ನಲಾಗಿದೆ.ನಾಳೆ ದಾವಣಗೆರೆಯಲ್ಲಿ ಬಿಜೆಪಿಯಿಂದ ರೈತ ಸಮಾವೇಶ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ನಗರದ ಹೈಸ್ಕೂಲ್ ಮೈದಾನ ಸಮಾವೇಶಕ್ಕೆ ಸಜ್ಜಾಗುತ್ತಿದ್ದು, 40 ಅಡಿ ಉದ್ದ, 50 ಅಡಿ ಅಗಲದ ವೇದಿಕೆ ತಯಾರಾಗಿದೆ. 12 ಆಸನಗಳಿಗಷ್ಟೇ ಅವಕಾಶವಿದ್ದು, ಹಿಂಬದಿಯಲ್ಲಿ ಎಲ್ ಎಡಿ ಪರದೆ ಇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕಾಗಿ 70 ಸಾವಿರ ಕುರ್ಚಿ ಹಾಕಲಾಗುತ್ತಿದೆ.
Comments