ಗಂಡು ಮೆಟ್ಟಿದ ನಾಡಿನಲ್ಲಿ ಕಾಂಗ್ರೆಸ್ ನ ಜನಶೀರ್ವಾದದ ಮೆರಗು

ಚುನಾವಣೆ ಸಮೀಪವಾಗುತ್ತಿದ್ದಂತೆ ಇತ್ತ ರಾಜಕೀಯದ ರಂಗು ಮತ್ತಷ್ಟು ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳ ನಡುವೆ ಏರ್ಪಡುತ್ತಿರುವ ಪೈಪೋಟಿ ಇವೆಲ್ಲವೂ ಸಹ 2018 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮತ್ತಷ್ಟು ಮೆರಗು ತಂದಿದೆ.
ಹೌದು ಬಿಜೆಪಿ ತನ್ನ ಪರಿವರ್ತನಾ ಯಾತ್ರೆಯ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇತ್ತ ಕಾಂಗ್ರೆಸ್ ಬಿಜೆಪಿ ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.ಅದಕ್ಕಾಗಿಯೇ ಇಂದು ಗಂಡು ಮೆಟ್ಟಿದ ನಾಡಿನಲ್ಲಿ ಬೃಹತ್ ಸಮೇಶ ಹಮ್ಮಿಕೊಳ್ಳಲಾಗಿದೆ.ಕೈ ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗೆ ಬಿದ್ದು ತಮ್ಮ ನಾಯಕರ ಮುಂದೆ ಬಲಪ್ರದರ್ಶನ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾದ ನಂತರ ರಾಹುಲ್ ಗಾಂಧಿ ಪ್ರಥಮ ಬಾರಿಗೆ ಗಂಡುಮೆಟ್ಟಿದ ನಾಡಿಗೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕನ ಸ್ವಾಗತಕ್ಕೆ ಕಾರ್ಯಕರ್ತರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ರಾಹುಲ್ ಗಾಂಧಿ ಮತ್ತು ಸಿಎಮ್ ಸಿದ್ಧರಾಮಯ್ಯನವರನ್ನು ಸ್ವಾಗತ ಕೋರುವ ಬೃಹತ್ ಕಟೌಟ್‌ಗಳನ್ನು ಹಾಕಲಾಗಿದೆ. ರಸ್ತೆ ವಿಭಜಕಗಳು ಮತ್ತು ರಸ್ತೆ ಇಕ್ಕೆಲಗಳಲ್ಲಿ ಬ್ಯಾನರ್ ಬಂಟಿಂಗ್ಸ್ ಹಾಕಲಾಗಿದೆ. ಧಾರವಾಡದಿಂದ ಹುಬ್ಬಳ್ಳಿಯವರೆಗೆ ರಾಹುಲ್ ಗಾಂಧಿಯವರ ರೋಡ್‌ಶೋ ನಡೆಯಲಿದೆಒಟ್ಟಾರೆ ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಮೇನಿಯಾ ಜೋರಾಗಿಯೇ ಕಾಣಿಸುತ್ತಿದೆ.
Comments