ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಮೆಟ್ಟಿಲೇರಿ ಆಗಮಿಸಿದ ದೇವೇಗೌಡ್ರು...!
ಜೆಡಿಎಸ್ ನ ವರಿಷ್ಠ ರಾದ ಎಚ್ ಡಿ ದೇವೇಗೌಡರು ರಾಜಕೀಯ ತಂತ್ರವನ್ನು ಮಾತ್ರ ರೂಪಿಸುತ್ತರೆ ಎನ್ನುವುದು ಮಾತ್ರವಲ್ಲೇ ಈ ವಯಸ್ಸಿನಲ್ಲೂ ಸಹ ಯಾವ ಯುವ ರಾಜಕಾರಣಿಗೂ ಕಡಿಮೆಯಿಲ್ಲ. ಇತ್ತೀಚೆಗಷ್ಟೇ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ 88ನೇಯ ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡೋಲಿ ನಿರಾಕರಿಸಿ ವಿಂಧ್ಯಗಿರಿ ಬೆಟ್ಟವೇರಿದ್ದರು.
ಇದೀಗ 85ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರ ಸರದಿ. ಹೌದು ಶನಿವಾರ ಶ್ರವಣಬೆಳಗೊಳಕ್ಕೆ ಆಗಮಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಡೋಲಿಯನ್ನು ಸಾರಸಗಟಾಗಿ ನಿರಾಕರಿಸಿ ಆಪ್ತರ ಸಹಾಯದೊಂದಿಗೆ ವಿಂಧ್ಯಗಿರಿ ಬೆಟ್ಟವನ್ನು ಏರಿದರು. ಗೌಡರು 412 ಮೆಟ್ಟಿಲು ಹತ್ತಿ ಬಾಹುಬಲಿ ದರ್ಶನ ಪಡೆದು ಅಭಿಷೇಕ ನೆರವೇರಿಸಿರುವುದು 88ನೇ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿನ ದಾಖಲೆಯಾಗಿದೆ.
Comments