ಬಿಜೆಪಿಯಲ್ಲಿನ ಬಿರುಕು ಮುಚ್ಚಲು ಅಮಿತ್ ಶಾ ಮಾಸ್ಟರ್ ಪ್ಲಾನ್ ..!
ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿರೋ ಶಾ, ಬಿಜೆಪಿಯಲ್ಲಿನ ಬಿರುಕನ್ನು ಮುಚ್ಚಲು ಆಮಿಸುತ್ತಿದ್ದರೆ ಎನ್ನಲಾಗಿದೆ. ಹೌದು ಇತ್ತೀಚಿಗೆ ಕೆ ಎಸ್ ಈಶ್ವರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಡುವೆ ಬಿರುಕು ಮೂಡಿದೆ.
ಅಲ್ಲದೆ ಕೆ ಎಸ್ ಈಶ್ವರಪ್ಪನವರು ಜೆಡಿಎಸ್ ನತ್ತ ಮುಖ ಮಾಡಲಿದ್ದಾರೆ ಎಂಬ ವಿಷಯ ತಿಳಿದ ಶಾ ಇವರಿಬ್ಬರ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಲು ಬರುತ್ತಿದ್ದರೆ ಎನ್ನಲಾಗಿದೆ.ಅದು ಅಲ್ಲದೆ ಏಪ್ರಿಲ್‍ನಲ್ಲಿ ಬಿಜೆಪಿ ಹೈಕಮಾಂಡ್ 150 ಕ್ಷೇತ್ರಗಳ ಮೊದಲ ಪಟ್ಟಿ ರಿಲೀಸ್ ಮಾಡಲಿದೆ. ಮೊದಲ ಪಟ್ಟಿಯಲ್ಲಿ ಶಿವಮೊಗ್ಗ, ಶಿಕಾರಿಪುರ ಟಿಕೆಟ್ ಘೋಷಣೆ ಮಾಡದಿರಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ, ಶಿಕಾರಿಪುರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡೋ ಸಾಧ್ಯತೆಗಳಿವೆ. ಈ ಮೂಲಕ ಬಿಜೆಪಿಯಲ್ಲಿ ಭಿನ್ನ ಮತವನ್ನು ಸರಿಪಡಿಸಲು ಶಾ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ
Comments