ಎಸ್.ಟಿ.ಸೋಮಶೇಖರ್ ವಿರುದ್ಧ ಗುಡುಗಿದ ಪರಂ
ಕಾಂಗ್ರೆಸ್ ಶಾಸಕರ ಆಪ್ತರ ದೌರ್ಜನ್ಯ ವಿಚಾರಕ್ಕೆ ಬೇಸರಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಸ್.ಟಿ.ಸೋಮಶೇಖರ್ ಅವರಿಗೂ ತರಾಟೆ ತೆಗೆದುಕೊಂಡ ಪರಮೇಶ್ವರ್ ಅಣ್ಣ ತಮ್ಮಂದಿರ ಆಸ್ತಿ ವಿಚಾರದಲ್ಲಿ ನಿಮ್ಮ ಪಾತ್ರವೇನು? ನಿಮ್ಮ ಬೆಂಬಲಿಗರು ಅಲ್ಲಿಗೆ ಏಕೆ ಹೋಗ್ತಾರೆ? ಮಚ್ಚು, ಲಾಂಗ್, ಓಡುವುದು, ಟಿವಿಯಲ್ಲಿ ನೋಡಿದ್ದೇನೆ. ಇದೆಲ್ಲ ಬೇಡ. ಆಶಿಸ್ತು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಚುನಾವಣೆಯ ಹೊಸ್ತಲಿನಲ್ಲಿ ಈ ರೀತಿಯ ರಂಪಾ ರಾದ್ಧಂತ ಮಾಡಬೇಡಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಬೇಕು ಅಂದುಕೊಂಡಿದ್ದೀರಿ? ಮುಂದೆ ಟಿಕೆಟ್ ಬೇಕು, ಪುನರಾಯ್ಕೆ ಆಗಬೇಕೆಂದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡಿ. ದೌರ್ಜನ್ಯ, ದಾಂಧಲೆ ಮಾಡುವುದು, ಪಕ್ಷದ ವರ್ಚಿಸ್ಸಿಗೆ ಧಕ್ಲೆ ತರುವುದನ್ನು ಸಹಿಸುವುದಿಲ್ಲ ಎಂದು ಇಬ್ಬರೂ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
Comments