ಕಾಂಗ್ರೆಸ್ ಶಾಸಕ ಹ್ಯಾರಿಸ್ ಪರ ನಿಂತ ನಟಿ ಸಂಜನಾ

ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ನಡೆದಿರುವ ಹಲ್ಲೆ ವಿಚಾರದ ಬಗ್ಗೆ ನಟಿ ಸಂಜನಾ ಗಲ್‍ರಾನಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಲ್ಲೆ ವಿಚಾರ ಕೇಳಿ ನನಗೆ ಬೇಸರವಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ವಿದ್ವತ್ ಗೆ ನ್ಯಾಯ ಸಿಗಬೇಕು.
ಅಷ್ಟೇ ಅಲ್ಲದಯೇ ಸಮಾಜದಲ್ಲಿ ಬಡವರಿಗೆ ಹಾಗು ಶ್ರೀಮಂತರಿಗೆ ಒಂದೇ ರೀತಿಯ ನ್ಯಾಯ ದೊರಕಬೇಕು. ಮಹಮ್ಮದ್ ಹ್ಯಾರಿಸ್ ಜೀಗೆ ನನ್ನ ಸಹಾನುಭೂತಿ ಇದೆ. ಮಗ ಮಾಡಿರುವ ತಪ್ಪಿಗೆ ಈ ದಕ್ಷ ನಾಯಕ ಬೆಲೆ ಕಟ್ಟುತ್ತಿದ್ದಾರೆ. ಈ ಪ್ರಕರಣ ನಡೆಯುವ ಮುನ್ನ ಮಹಮ್ಮದ್ ಹ್ಯಾರಿಸ್ ಪ್ರಾಮಾಣಿಕವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಮಗ ಮಾಡಿರುವ ತಪ್ಪಿಗೆ ಅಪ್ಪನನ್ನು ನಿಂದಿಸುವುದು ತರವಲ್ಲವೆಂದು, ಶಾಂತಿನಗರದ ಶಾಸಕ ಹ್ಯಾರಿಸ್ ರವರಿಗೆ ನಟಿ ಸಂಜನಾ ಬೆಂಬಲ ಸೂಚಿಸಿದ್ದಾರೆ.
Comments