ಮತದಾರರನ್ನು ಸೆಳೆಯಲು ಕಾಂಗ್ರೆಸ್ ನಿಂದ ವಿಶಿಷ್ಟ ಪ್ರಣಾಳಿಕೆ ಸಿದ್ದ
ಆಡಳಿತ ರೂಢ ಪಕ್ಷವಾದ ಕಾಂಗ್ರೆಸ್ ಮತದಾರರನ್ನು ಸೆಳೆಯುವ ಹಿನ್ನೆಲೆ ವಿಶಿಷ್ಟ ರೀತಿಯಲ್ಲಿ ತನ್ನ ಪ್ರಣಾಳಿಕೆಯನ್ನು ಪ್ರಕಟಗೊಳಿಸಿ ಜನರ ಮನ ಮುಟ್ಟುವಂತೆ ಮಾಡಲಾಗುತ್ತಿದೆ. ಮಾರ್ಚ್ 10 ಮತ್ತು 15ರ ನಡುವೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಲಿದ್ದಾರೆ.
ಈ ಪ್ರಣಾಳಿಕೆ ಮೂರು ಬೇರೆ ಬೇರೆ ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಜಿಲ್ಲೆಗೊಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಕಾಂಗ್ರೆಸ್! ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಮೂರು ಪ್ರಣಾಳಿಕೆಗಳಲ್ಲಿ 2 ಪ್ರಣಾಳಿಕೆಗಳು ಪ್ರದೇಶಗಳನ್ನು ಮತ್ತು ಜಿಲ್ಲೆಗಳನ್ನು ಕೇಂದ್ರೀಕರಿಸಿ ತಯಾರಿಸಲಾಗಿರುತ್ತದೆ. ಮೂರನೇ ಪ್ರಣಾಳಿಕೆ ರಾಜ್ಯಮಟ್ಟದ್ದಾಗಿರುತ್ತದೆ ಎಂದು ಅವರು ವಿವರ ನೀಡಿದರು.
Comments