ಮತ್ತೋರ್ವ ಕೈ ಶಾಸಕ ಬಂಡವಾಳ ಬಟ್ಟ ಬಯಲು ..!

ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣ ಈಗಾಗಲೇ ಕಾಂಗ್ರೆಸ್ ಗೆ ತಲೆ ನೋವು ತಂದಿದ್ದು ಈಗ ಮತ್ತೊಂದು ತಲೆ ನೋವು ಎದುರಾಗಿದೆ. ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು ಸಮಾವೇಶಕ್ಕೆ ಜಾಗ ನೀಡಲಿಲ್ಲವೆಂದು ದ್ವೇಷದಲ್ಲಿ ಗುಂಪು ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.
ತಿಗಳರ ಪಾಳ್ಯದಲ್ಲಿ ಘಟನೆ ನಡೆದಿದ್ದು,ಹಳೆ ದ್ವೇಷ ಮತ್ತು ಮನೆ ಮನೆಗೆ ಕಾಂಗ್ರೆಸ್ ಸಮಾವೇಶ ನಡೆಸಲು ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಜೋಗಣ್ಣ ಗೌಡ ಎನ್ನುವವರನ್ನು ಗುರಿಯಾಗಿರಿಸಿ ಕೊಂಡು ಶಾಸಕ ಸೋಮಶೇಖರ್ ಅವರ 20 ಕ್ಕೂ ಹೆಚ್ಚು ಬೆಂಬಲಿಗರು ಲಾಂಗು,ಮಚ್ಚು, ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಟಿ.ಸೋಮಶೇಖರ್ ಅವರು , ಕಳೆದ 40 ವರ್ಷಗಳಿಂದ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ರೌಡಿಸಂ ಮಾಡುವವನು ನಾನಲ್ಲ. ಇದು ಸ್ಥಳೀಯರ ನಡುವೆ ನಡೆದ ಜಗಳ,ಚುನಾವಣೆ ವೇಳೆ ನನ್ನನ್ನು ಗುರಿಯಾಗಿರಿಸಿ ಆರೋಪ ಮಾಡಲಾಗಿದೆ.ನನ್ನದು ತಪ್ಪು ಕಂಡು ಬಂದರೆ ರಾಜಕೀಯ ನಿವೃತ್ತಿ ಪಡೆಯಲೂ ಸಿದ್ಧ.ಇದೆಲ್ಲಾ ಕೆಲ ವಿಪಕ್ಷದ ನಾಯಕರು ಮಾಡಿರುವ ಸಂಚು' ಎಂದಿದ್ದಾರೆ.
Comments