ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಬಾಲಿವುಡ್ ನಟಿ

ಬಾಲಿವುಡ್ ನಟಿ ಕಂಗನಾ ರಾಣಾವತ್ ರಾಜಕೀಯ ಸೇರ್ತಾರಾ ? ಇಂಥದ್ದೊಂದು ದಟ್ಟ ವದಂತಿ ಈಗ ಕೆಲ ದಿನಗಳಿಂದ ಮಾಧ್ಯಮ ವರ್ತುಲಗಳಲ್ಲಿ ಹರಿದಾಡುತ್ತಿದೆ. ಕಂಗನಾ ರಾಣಾವತ್ ರಾಜಕೀಯ ಸೇರುವ ಇರಾದೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಎಲ್ಲರ ಹುಬ್ಬೇರಿಸಿವೆ.
ಈ ವರದಿಗಳ ಸತ್ಯಾಂಶದ ಬಗ್ಗೆ ಕಂಗನಾ ಪ್ರತಿಕ್ರಿಯೆ ಏನು ಎಂದು ತಿಳಿಯುವ ಕುತೂಹಲದಲ್ಲಿ ಬಾಂಬೇ ಟೈಮ್ಸ್ ಕಂಗನಾ ವಕ್ತಾರೆಯನ್ನು ಸಂಪರ್ಕಿಸಿದಾಗ, ಆಕೆ 'ಈ ಬಗೆಯ ವದಂತಿಗಳು ಕೇವಲ ಊಹಾಪೋಹದ ವರದಿಗಳು ಮತ್ತು ಅವು ಸಂಪೂರ್ಣ ಸುಳ್ಳು; ಕಂಗನಾ ರಾಣಾವತ್ ರಾಜಕೀಯ ಸೇರುವ ಪ್ರಶ್ನೆಯೇ ಇಲ್ಲ' ಎಂದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ.ಈಚೆಗೆ ಬಿಕಾನೇರ್ನಲ್ಲಿ ಮಣಿ ಕರ್ಣಿಕಾ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಕಂಗನಾ ತಾನು 'ರಾಜಕೀಯ ಸೇರುವ ಬಗೆಗಿನ ವದಂತಿಗಳು, ವರದಿಗಳು ಸಂಪೂರ್ಣ ಸುಳ್ಳು; ಅವುಗಳಲ್ಲಿ ಯಾವುದೇ ಹುರುಳಿಲ್ಲ' ಎಂದು ಖುದ್ದಾಗಿ ಹೇಳಿದ್ದರು. ತನ್ನ ಮುಂದೆ ಸಾಲು ಸಾಲು ಚಿತ್ರಗಳೇ ಇರುವಾಗ ತಾನು ಅವುಗಳನ್ನು ಬಿಟ್ಟು ರಾಜಕೀಯವನ್ನು ಯಾಕಾದರೂ ಸೇರಿಯೇನು ? ಎಂದು ಕಂಗನಾ ಮಾಧ್ಯಮದವರನ್ನೇ ಪ್ರಶ್ನಿಸಿದ್ದರು.
Comments