ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಗ್ಗೆ ಗುಟ್ಟು ರಟ್ಟು ಮಾಡಿದ ದೇವೇಗೌಡ್ರು ..!
ಚುನಾವಣಾ ಆಯೋಗ ಇನ್ನೂ ಮತದಾನದ ದಿನಾಂಕವನ್ನು ಘೋಷಿಸಿಲ್ಲ. ಆದರೆ ನೀವು ಇದಕ್ಕೂ ಮೊದಲೇ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದ ಅಧಿಕೃತ ಪಟ್ಟಿ ಘೋಷಿಸಿದ್ದೀರಿ ಇದಕ್ಕೆ ಕಾರಣವೇನು? ಜೆಡಿಎಸ್ ಈ ಮೊದಲು ಯಾವತ್ತೂ ಹೀಗೆ ಮಾಡಿರಲಿಲ್ಲವಲ್ಲ?
ಈ ಬಾರಿ ಸಂದರ್ಭ ಬದಲಾಗಿದೆ. ಈ ಬಾರಿಯ ಚುನಾವಣೆ ನಮಗೆ ಹಾಗೂ ಕರ್ನಾಟಕದ ಜನರ ಪಾಲಿಗೆ ಬಹಳ ಮಹತ್ವಪೂರ್ಣವಾಗಿದೆ. ನಾವು ಈ ಬಾರಿ ಅತಿ ಶ್ರೀಮಂತ ಪಕ್ಷವೆನಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿಯೊಂದಿಗೆ ಕಣಕ್ಕಿಳಿಯುತ್ತಿದ್ದೇವೆ. ನಮ್ಮದು ಬಡವರ ಪಕ್ಷ ಹೀಗಾಗಿ ನಾವು ಹಣದ ಆಧಾರದಲ್ಲಿ ಚುನಾವಣೆಗಿಳಿಯಲು ಸಾಧ್ಯವಿಲ್ಲ. ಆದರೆ ನಾವು ನಮ್ಮ ಚುನಾವಣಾ ತಂತ್ರದೊಂದಿಗೆ ತಯಾರಿದ್ದೇವೆ. ಇನ್ನು ಮತಗಳ ಹಂಚಿಕೆ ತಡೆಯಲು BSP ಹಾಗೂ NCP ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಯಾರೂ ನಮ್ಮನ್ನು ಈ ಬಾರಿ ಲಘುವಾಗಿ ಪರಿಗಣಿಸುವುದು ಬೇಡ. ಮಾಯಾವತಿಯವರು ಇಂದು ದೇಶದಲ್ಲೇ ಅತಿ ದೊಡ್ಡ ದಲಿತ ನಾಯಕಿ.
ಅವರು ದಲಿತರ ಪ್ರತೀಕವೆಂದರೆ ತಪ್ಪಾಗುವುದಿಲ್ಲ. ಭ್ರಷ್ಟ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯೊಂದಿಗೆ ಹೋರಾಡಲು ಅವರೇ ಖುದ್ದು ತಯಾರಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಇವೆರಡೂ ದಲಿತ ವಿರೋಧಿ ಪಕ್ಷಗಳು, ಆದರೂ ಚುನಾವಣೆಯ ಸಂದರ್ಭದಲ್ಲಿ ಈ ವರ್ಗವನ್ನು ವೋಟ್ ಬ್ಯಾಂಕ್ಗಳಾಗಿ ಬಳಸಿಕೊಳ್ಳುತ್ತಾರೆ. ದಲಿತರು ನಮ್ಮ ಮೈತ್ರಿಯಿಂದ ಬಹಳ ಖುಷಿಪಟ್ಟುಕೊಂಡಿದ್ದಾರೆ, ಅಲ್ಲದೇ ಕಳೆದ ಶನಿವಾರ ಆಯೋಜಿಸಿದ್ದ ಮೈತ್ರಿ ಸಮಾವೇಶದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು ಎಂದು ಹೇಳಿದರು.
Comments