ಬಿಜೆಪಿ ಸೇರ್ಪಡಗೆ ಜೈ ಎಂದ ಬಿಗ್ ಬಾಸ್ ಸ್ಪರ್ಧಿ



ಬಿಗ್ ಬಾಸ್ 5 ಸ್ಪರ್ಧೆಯಲ್ಲಿ ತಮ್ಮ ವಾಕ್ ಚಾತುರ್ಯದಿಂದ ಎಲ್ಲರ ಮನ ಗೆದ್ದಿದ್ದ ಈ ಸ್ಪರ್ಧಿ ಜಯ ಶ್ರೀನಿವಾಸನ್ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನೇಕ ರಾಜಕಾರಣಿಗಳು, ನಾಯಕ ನಟರು ಇವರ ನ್ಯೂಮರಾಲಜಿಯನ್ನು ಫಾಲೋ ಮಾಡುತ್ತಿದ್ದಾರೆ ಕೂಡ.
ಇಂತಹ ವ್ಯಕ್ತಿ ಕೆಲವು ದಿನಗಳಿಂದಲೂ ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಸೋಮವಾರ ಮೈಸೂರಿನ ಬಿಜೆಪಿ ಪರಿವರ್ತನಾ ಸಮಾವೇಶದಲ್ಲೂ ಕಂಡುಬಂದಿದ್ದರು. ಅವರನ್ನೇ ಪ್ರಶ್ನಿಸಲು ತೆರಳಿದಾಗ ಜಯಶ್ರೀನಿವಾಸನ್ ರಾಜಕೀಯ ಪ್ರವೇಶದ ಬಗ್ಗೆ ಇರುವ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಬಿಜೆಪಿ ಸೇರುವುದು ನನ್ನ ವೈಯಕ್ತಿಕ ನಿಲವು. ನಾನು ಹುಟ್ಟಿದಾಗಿನಿಂದ ಹಿಂದೂ. ಇಲ್ಲಿನ ತತ್ವ- ಸಿದ್ಧಾಂತಗಳಿಂದ ಉತ್ತೇಜಿತನಾಗಿದ್ದೇನೆ. ನನಗೆ ಮುಂಚಿನಿಂದಲೂ ಕಮಲ ಪಕ್ಷಕ್ಕೆ ಸೇರಬೇಕೆಂಬ ಹಂಬಲವಿತ್ತು. ಈಗ ಅದು ಸಾಕಾರಗೊಂಡಿದೆ. ನನ್ನ ಬಳಿ ಯಾವ ಮುಖಂಡರೂ ಮಾತುಕತೆ ನಡೆಸಿಲ್ಲ. ಇದು ನನ್ನ ಸ್ವಂತ ನಿರ್ಧಾರ ಹಾಗೂ ಸ್ವ ಇಚ್ಛೆ. ಬಿಜೆಪಿಯಲ್ಲಿನ ಧುರೀಣರು ಹಾಗೂ ನರೇಂದ್ರ ಮೋದಿ ಅವರ ಕನಸಿನ ಭಾರತದ ನಿಲುವು ಹೆಚ್ಚು ಪ್ರೇರಿತವಾಗಿದೆ. ಬಿಜೆಪಿಯ ಅನೇಕ ಮುಖಂಡರು ತಳಮಟ್ಟದಿಂದ ಮೇಲೆ ಬಂದವರು. ಈ ವಿಷಯವೇ ಬಿಜೆಪಿ ಸೇರಲು ಪ್ರೇರಕ ಶಕ್ತಿ.
Comments