ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿರುವ ಪ್ರಿಯಾ ಪ್ರಕಾಶ್
ತನ್ನ ಕಣ್ ಸನ್ನೆಯ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಪ್ರಿಯಾ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್, ನ್ಯಾಷನಲ್ ಕ್ರಶ್ ಜತೆಗೆ ವಿಶ್ವದ ಮೂರನೇ ಟಾಪ್ ಸೆಲಬ್ರಿಟಿಯಾಗಿ ಗುರುತಿಸಿಕೊಂಡ ಈ ನಟಿ ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಂತರ ಅಭಿಮಾನಗಳನ್ನು ಗಿಟ್ಟಿಸಿಕೊಂಡಿರುವುದು ಇದೀಗ ಇತಿಹಾಸ.
ತನ್ನ ಭಾವಾಭಿನಯದಿಂದಲೇ ಸುದ್ದಿಯಾದ ನಟಿ ಪ್ರಿಯಾ, ಯೋಗಿ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗ್ತಿರೋ ಹೊಸ ಚಿತ್ರ 'ಯೋಗಿ ಲವ್ಸ್ ಸುಪ್ರಿಯಾ' ಅನ್ನೋ ಕನ್ನಡದ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಚಿತ್ರದ ಕಥೆ ಕೇಳಿ ಒಂದು ಸುತ್ತಿನ ಮಾತುಕತೆ ಮುಗಿಸಿರೋ ಪ್ರಿಯಾ, ಕನ್ನಡ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.
Comments