ಸಿಎಂ ವಿರುದ್ಧ ಜೆಡಿಎಸ್ ಶಾಸಕ ಜಿಟಿಡಿ ಹಕ್ಕುಚ್ಯುತಿ ಮಂಡನೆ
ಇಂದು ವಿಧಾನ ಸಭಾಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಕುರಿತಂತೆ ಬಾರಿ ಕೋಲಾಹಲವೇ ನಡೆದಿದೆ. ಅದೇ ವೇಳೆ ಮಾತನಾಡಿದ ಜಿಟಿ ದೇವೇಗೌಡರು ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವಕಾಶ ನೀಡ್ತಿಲ್ಲ. ಮುಖ್ಯಮಂತ್ರಿಗಳ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ.
ಮುಖ್ಯಮಂತ್ರಿ ಇಲ್ಲೇ ಸ್ಪರ್ಧೆ ಮಾಡ್ತಾರೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ ಧಮ್ಕಿ ಹಾಕ್ತಾರೆ. ಪೊಲೀಸರನ್ನು ಬಿಟ್ಟು ಕೇಸ್ ಹಾಕ್ತಾರೆ ಅಂತ ವಿಧಾನಸಭೆಯಲ್ಲಿ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದ್ರು. ಇತ್ತ ನನ್ನ ಮಗ ಕಾರ್ಯಕ್ರಮಕ್ಕೆ ಹೋಗಿದ್ದಾನೋ ಇಲ್ವೋ ಅಂತ ನನಗೆ ಗೊತ್ತಿಲ್ಲ ಅಂತ ಸಿಎಂ ಹೇಳಿದ್ರೂ ನಂತರ ಹೋಗಿದ್ದಾನೆ ಅಂದ್ರು. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಜಿಟಿಡಿ ಹಕ್ಕುಚ್ಯುತಿ ಮಂಡನೆಗೆ ಮುಂದಾದ್ರು. ಆಗ ಸದನದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಗಲಾಟೆ ನಡೆಯಿತು.
Comments