ಕೆ ಎಸ್ ಪುಟ್ಟಣಯ್ಯನವರ ಅಗಲಿಕೆಗೆ ಕಂಬನಿ ಮಿಡಿದ ಎಚ್ ಡಿಕೆ ಹಾಗು ಎಚ್ ಡಿಡಿ

ಶಾಸಕ ಹಾಗೂ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ನವರು ವಿಧಿವಶರಾದ ಹಿನ್ನೆಲೆ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಯವರು ಹಾಗು ಎಚ್ ಡಿ ದೇವೇಗೌಡರು ಪುಟ್ಟಣಯ್ಯನವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ, ಪುಟ್ಟಣ್ಣಯ್ಯ ಅಗಲಿಕೆಗೆ ನೋವು ವ್ಯಕ್ತಪಡಿಸಿದ್ದಾರೆ. ಒಬ್ಬ ರೈತ ನಾಯಕರಾಗಿ, ಶಾಸಕರಾಗಿ ಸಮರ್ಥವಾಗಿ ತಮ್ಮ ಕಾರ್ಯವನ್ನು ಅವರು ನಿಭಾಯಿಸಿದ್ದರು. ಎರಡೂ ಕ್ಷೇತ್ರಕ್ಕೂ ನ್ಯಾಯ ಒದಗುವಂತೆ ಕಾರ್ಯನಿರ್ವಹಿಸಿದ್ದರು. ರೈತಪರ ಹೋರಾಟವನ್ನೇ ಜೀವನವಾಗಿಸಿ ಕೊಂಡಿದ್ದ ನಾಯಕರೊಬ್ಬರನ್ನ ಈ ನಾಡು ಕಳೆದುಕೊಂಡಿದೆ. ರೈತ ಪರ ಹೋರಾಟಕ್ಕೆ ಕೆ.ಎಸ್. ಪುಟ್ಟಣ್ಣಯ್ಯ ಅವರ ಕೊಡುಗೆ ಅದಮ್ಯ, ಮೇಲುಕೋಟೆಯನ್ನು ಪ್ರತಿನಿಧಿಸುವ ಶಾಸಕರಾಗಿ ವಿಧಾನ ಸಭೆಯಲ್ಲಿ ರೈತರ ಧ್ವನಿಯಾಗಿದ್ದರು. ಸರಳ ಸಜ್ಜನಿಕೆಯ ನೇರ ನುಡಿಯ ವ್ಯಕ್ತಿತ್ವ, ಸಮಾಜವಾದಿ ಜೀವನ, ಜಾತ್ಯಾತೀತ ನೆಲೆಗಟ್ಟಿನಲ್ಲಿ ರಾಜಕೀಯ ಮಾಡಿದ್ದವರು, ಇವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಆಶಿಸಿದ್ದಾರೆ.
ಇನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡ ತಮ್ಮ ಸಂತಾಪವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ್ದಾರೆ. ಮೇಲುಕೋಟೆ ಶಾಸಕರಾದ ಕೆ.ಎಸ್. ಪುಟ್ಟಣ್ಣಯ್ಯ ಅವರು ದೈವಾಧೀನರಾದರು ಎಂಬ ವಿಷಯ ಮನಸ್ಸಿಗೆ ಬಹಳ ನೋವುಂಟುಮಾಡಿದೆ. ರೈತರಿಗಾಗಿ ಹೋರಾಡಿದ ಒಬ್ಬ ರೈತಮಿತ್ರನನ್ನು ನಮ್ಮ ನಾಡು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಆಶಿಸಿದ್ದಾರೆ.
Comments