ಸದಾ ಮೋದಿ ವಿರುದ್ಧ ಕಿಡಿಕಾರುವ ಪ್ರಕಾಶ್ ರೈ ಗೆ ಸವಾಲೆಸೆದ ನವರಸ ನಾಯಕ

17 Feb 2018 1:31 PM | Politics
586 Report

ಪ್ರಧಾನಿ ಮೋದಿಯ ಕಾರ್ಯ ವೈಖರಿಯ ಬಗ್ಗೆ ಟೀಕಿಸುತ್ತಾ ಕಿಡಿ ಕಾರುವ ಬಹುಭಾಷಾ ನಟ ಪ್ರಕಾಶ ರೈ, ಇತ್ತೀಚೆಗಷ್ಟೇ ಮೋದಿಗೆ ದೇಶ ಆಳುವ ಹಕ್ಕಿಲ್ಲ ಎಂದು ಟ್ವಿಟ್ಟರ್ ನಲ್ಲಿ ಉಲ್ಲೇಖಿಸಿದ್ದರು. ಈ ಟ್ವಿಟ್ ಗೆ ನವರಸ ನಾಯಕ ಜಗ್ಗೇಶ್ ರವರು ಬರೀ ಟೀಕಿಸುವುದನ್ನು ಬಿಟ್ಟು ಗಂಡಸ್ತನ ಇದ್ದರೆ ಚುನಾವಣೆಗೆ ಸ್ಪರ್ಧಿಸಿ ತಾಕತ್ತು ತೋರಿಸಿ ಎಂದು ರೈ ಗೆ ಸವಾಲೆಸೆದಿದ್ದಾರೆ.

'ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮಾತಾಡುವ ಹಕ್ಕಿದೆ. ಆದರೆ ಪ್ರಚಾರಕ್ಕೆ, ಕೈ ನಾಯಕರ ಶಹಬಾಶ್ ಗಿರಿಗೆ ಬೇಕಿತ್ತಾ ಈ ತಳಮಟ್ಟದ ನಡೆ? ಮೋದಿ ತೆಗಳಿ ಯಾರೋ ಏನೋ ಆದರು ಅಂತ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ಪ್ರಶಸ್ತಿ ಸ್ವೀಕರಿಸುತ್ತೀರಿ? ನಿಲ್ಲಿ ಚುನಾವಣೆಗೆ! ತಟ್ಟಿತೊಡೆ ಅದು ಗಂಡಸ್ಸುತನ! ಯಾಕೆ ಚುನಾವಣೆ ಹೊಸ್ತಿಲಲ್ಲಿ ಈ ಡ್ರಾಮಾ ಕಂಪನಿ?' ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ. 

ನಿಮಗೆ ಏನು ಅರ್ಹತೆ ಇದೆ? ರಾಜಕೀಯ ಅನುಭವ ಇಲ್ಲಾ? ಕಾನೂನು ವಿದ್ಯಾರ್ಥಿಯೇ? ಅಲ್ಲ!ಗ್ರಾಮ, ಜಿಲ್ಲೆ, ತಾಲೂಕ್, ವಿಧಾನಸಭೆ, ಸಂಘಟನೆ, ಸ್ಪರ್ಧೆ? ಪರಿಚಯ? ಅದೃಷ್ಟ ಇತ್ತು, ಪ್ರತಿಭೆ ಇತ್ತು ಬಿಡುವಿಲ್ಲದ ನಟನಾದೆ. ತಮಿಳು ನಟನಾಗಿ ಕನ್ನಡಕ್ಕೆ ಸೊಲ್ಲಡಗಿತ್ತು! ಈಗ ಯಾಕೆ ಈ ಪೌರುಷ? ಪ್ರಚಾರ ತಾನೆ? ವ್ಯರ್ಥ ಬದುಕು!' ಎಂದು ಮತ್ತೊಂದು ಟ್ವೀಟ್ ನಲ್ಲಿ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಇನ್ನೊಂದು ಟ್ವೀಟ್ ನಲ್ಲಿ ನಮ್ಮ ನಿಮ್ಮ ಪ್ರಯಾಣ ರಾಜಕಿಶೋರ್ ಜತೆ ಮೈಸೂರು ಜೈಲಿಂದ! ನಾನು ಮರೆತಿಲ್ಲ! ಹೆಮ್ಮೆ ಪಟ್ಟೆ ನಿಮ್ಮ ಬೆಳವಣಿಗೆಗೆ! ರಾತ್ರೋ ರಾತ್ರಿ ರಾಷ್ಟ್ರ ನಾಯಕನಾಗಲು ಮೋದಿ ತೆಗಳುವ ಆಯ್ಕೆ! ನೆನಪಿಡಿ ಮೋದಿ ತೆಗಳಿದ್ದಕ್ಕೆ ನಿಮಗೆ ಮಾತನಾಡಲು ವೇದಿಕೆ ಸಿಗುತ್ತಿದೆ ಎಂದು ಎಚ್ಚರಿಸಿದ್ದಾರೆ.

Edited By

Shruthi G

Reported By

Madhu shree

Comments