ಪ್ರಧಾನಿ ಮೋದಿ ಆಗಮನಕ್ಕೆ ಸಿದ್ದು ಮಾಸ್ಟರ್ ಪ್ಲಾನ್
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಮೈಸೂರು ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದ್ದರು ಸಹ ನಾಳೆ ಮೋದಿಯನ್ನು ಸಿಎಂ ಸಿದ್ದರಾಮಯ್ಯನವರೇ ಬರ ಮಾಡಿಕೊಳ್ಳಲಿರುವುದು ಅನೇಕ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.
ಅಲ್ಲದೆ ಮೋದಿಗೆ ಸ್ವಾಗತ ನೀಡುತ್ತಿರುವ ಸಿದ್ದರಾಮಯ್ಯ ನವರು ಚುನಾವಣಾ ತಂತ್ರ ರೂಪಿಸಿದ್ದರಾ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೈಸೂರಿಗೆ ಆಗಮಿಸುತ್ತಿದ್ದು, ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಫೆ. 19ರಂದು ಮೈಸೂರಿನಲ್ಲಿ ಹಮ್ ಸಫರ್ ರೈಲು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು, ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸಿಎಂ ತವರಲ್ಲೇ ಅವರಿಗೆ ಆಹ್ವಾನ ನೀಡಿಲ್ಲ.
Comments