ಬಿಜೆಪಿಯಲ್ಲಿನ ಭಿನ್ನಮತ, ಹೊರೆ ಹೊತ್ತ ನಾಯಕರತ್ತ ಒಲಿದ ವಿಜಯ ಲಕ್ಷ್ಮಿ ..!!
ಜೆಡಿಎಸ್‌ನಿಂದ ಬಂದ ಡಾ.ಶಿವರಾಜ ಪಾಟೀಲ್‌ಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ನಿರ್ಧರಿಸಿರುವುದು ರಾಯಚೂರು ನಗರ ಕ್ಷೇತ್ರದ 12 ಬಿಜೆಪಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ. ಜಿಲ್ಲೆಯ ಕಮಳ ಪಾಳೆಯದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿದೆ.
ಡಾ.ಶಿವರಾಜ ಪಾಟೀಲ್ ಬಿಜೆಪಿ ಸೇರ್ಪಡೆಗೆ 12 ಜನ ಬಿಜೆಪಿ ಆಕಾಂಕ್ಷಿಗಳ ವಿರೋಧವಿತ್ತು. ಆದರೂ ವರಿಷ್ಠರು ಅವರನ್ನ ಬಿಜೆಪಿಗೆ ಸೇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ರಾಯಚೂರಿನ ಸಂತೋಷ ಹೋಟೆಲ್‌ನಲ್ಲಿ ರಾಜ್ಯ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಗೆ ಗೈರಾಗಿದ್ದಾರೆ.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಕೇಂದ್ರದ ಮಾಜಿ ಸಚಿವೆ ಡಿ.ಪುರಂದೇಶ್ವರಿ ಅವರು ಬಿಜೆಪಿ ಜಿಲ್ಲಾ ನಾಯಕರು, ಬೂತ್ ಮಟ್ಟದ ಮುಖಂಡರ ಸಭೆ ಕರೆದಿದ್ದರು. ಇದಕ್ಕೆ ಬಸವನಗೌಡ ಪಾಟೀಲ್, ಎ. ಪಾಪರೆಡ್ಡಿ, ಈ. ಆಂಜಿನೇಯ ಸೇರಿದಂತೆ 12 ಜನ ಬಿಜೆಪಿ ನಾಯಕರು ಗೈರಾಗಿದ್ದಾರೆ. ಈ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮೂಲಗಳ ಪ್ರಕಾರ ಇವರು ಜೆಡಿಎಸ್ ನತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಇಂತಹ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಗೆ ಲಾಭವಾಗಲಿದೆ ಎಂದು ಮೂಲಗಳು ತಿಳಿಸಿವೆ.ಇದು ಬಿಜೆಪಿ ಪಾಳಯಕ್ಕೆ ಮುಳುವಾಗಲಿದೆ.
Comments