ಕಾವೇರಿ ತೀರ್ಪಿನ ಬಗ್ಗೆ ರಜನಿ, ಕಮಲ್ ಏನಂದ್ರು ?
ತಮಿಳು ನಾಡಿನ ಸೂಪರ್ ಸ್ಟಾರ್ ರಜನಿ ಕಾಂತ್ ಹಾಗೂ ಕಮಲ್ ಹಾಸನ್ ತಮ್ಮ ನಟನೆಯ ಮೂಲಕ ತಮಿಳು ಚಿತ್ರ ರಂಗದಲ್ಲಿ ಗುರುತಿಸಿಕೊಂಡವರು. ಇತ್ತೀಚಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಈ ಜೋಡಿ ಕಾವೇರಿ ತೀರ್ಪಿನ ಬಗ್ಗೆ ಬೇಸರ ವ್ಯೆಕ್ತ ಪಡಿಸಿದ್ದಾರೆ.
ಸೂಪರ್ ಸ್ಟಾರ್ ರಜನಿ ಕಾಂತ್ ಮಾತನಾಡಿ "ಕಾವೇರಿ ತೀರ್ಪು ನಿರಾಶಾದಾಯಕವಾಗಿದೆ. ಇದು ರೈತರ ದಿನನಿತ್ಯದ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರಕಾರ ಮುಂದಾಗಬೇಕು," ಎಂದು ಬೇಸರ ವ್ಯೆಕ್ತ ಪಡಿಸಿದರು. "ನೀರಿನ ಪೂರೈಕೆ ಇಳಿಸಿರುವುದು ನನಗೂ ಆಘಾತವನ್ನುಂಟು ಮಾಡಿದೆ. ನಾನು ಆದೇಶವನ್ನು ಸಂಪೂರ್ಣವಾಗಿ ಓದಬೇಕಿದೆ. ಆದರೆ ಸುಪ್ರೀಂ ಕೋರ್ಟ್ ನೀರನ್ನು ಯಾವುದೇ ರಾಜ್ಯ ತನ್ನ ಸ್ವಂತ ಆಸ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ," ಎಂಬುದಾಗಿ ಕಮಲ್ ಹಾಸನ್ ಹೇಳಿದ್ದಾರೆ.
Comments