ಬಜೆಟ್ ಮಂಡನೆಗೆ ಸಜ್ಜಾದ ಸಿದ್ದು..!!
ರಾಜ್ಯದ ಬಜೆಟ್ ಮಂಡನೆಗೆ ಸಜ್ಜಾದ ಸಿಎಂ ಸಿದ್ದರಾಮಯ್ಯ ಇದು ಸಿದ್ದು ಸರ್ಕಾರದ ಕೊನೆಯ ಬಜೆಟ್ ಆಗಿದ್ದು ಬಜೆಟ್ ನಲ್ಲಿ ಏನನ್ನೆಲ್ಲಾ ಮಂಡನೆ ಮಾಡುತ್ತಾರೆಂಬ ಕುತೂಹಲವಿದೆ . ಈ ಹಿಂದೆ ಸಿದ್ದರಾಮಯ್ಯಾರನ್ನು ಹೀಯಗೆಳೆದಿರುವ ದೃಶ್ಯವುಇದೆ.
ಕುರಿಗಳನ್ನು ಲೆಕ್ಕ ಹಾಕಲು ಬಾರದವನು ಬಜೆಟ್ ನಲ್ಲಿ ಏನು ಮಾಡತಾನೆ ಅಂತ ಈ ಟೀಕೆಗೆ ಉತ್ತರ ಕೊಟ್ಟ ಸಿಎಂ ಇಂದಿನ ಬಜೆಟ್ ನಲ್ಲಿ ತಮ್ಮ ಛಾಕಚಾಕ್ಯತೆ ತೋರಲಿದ್ದಾರೆ. ಅದು ಅಲ್ಲದೆ ಈ ಬಾರಿ ವಿದಾನ ಸಭಾ ಚುನಾವಣೆಯನ್ನು ನೆನಪಿನಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಬೇಕಿದೆ. ಸಿದ್ದರಾಮಯ್ಯನವರಿಗೆ ಈ ಬಜೆಟ್ ವರವು ಆಗಬಹುದು, ಶಾಪವು ಆಗಬಹುದು.
ಬಜೆಟ್ ನಲ್ಲಿನ ಮುಖ್ಯಾಂಶಗಳು : ರಾಜ್ಯ ಸರ್ಕಾರಿ ನೌಕರರ 6ನೇ ವೇತನ ಆಯೋಗದ ಶಿಫಾರಸು ಗಳನ್ನು ಯಥಾವತ್ತಾಗಿ ಜಾರಿಗೊಳಿಸುವ ಜತೆಗೆ ಸರ್ಕಾರಿ ನೌಕರರ ವೇತನದಲ್ಲಿ ಶೇ.30 ರಷ್ಟು ಹೆಚ್ಚಳವನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆಗಳಿವೆ. ಅಲ್ಲದೆ, ವಸ್ತ್ರಭಾಗ್ಯ ಮತ್ತೆ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬಾರಿ ಬಜೆಟ್ ಗಾತ್ರ 2.10 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆ ಇದೆ. ಇದರೊಂದಿಗೆ ಸಾರ್ವತ್ರಿಕ ವಿಮಾ ಯೋಜನೆಗೂ ಅನುದಾನ ಒದಗಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಈ ಬಾರಿ 30,000 ಕೋಟಿ ರೂ. ಮೀಸಲಿಡುವ ಬಗ್ಗೆಯೂ ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಅದಕ್ಕೆ ತಕ್ಕಂತೆ ರಾಜ್ಯದ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಅಬಕಾರಿ, ಪೆಟೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ಆದರೂ ಜನಪ್ರಿಯ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸಬೇಕಾದರೆ ಸಾಲದ ಪ್ರಮಾಣ ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಆದಾಯ ಸಂಗ್ರಹ ಕುರಿತಂತೆ ಸಾಕಷ್ಟು ಗೊಂದಲ ಕಾಣಿಸಿಕೊಂಡರೂ ಇದೀಗ ಸಮಸ್ಯೆ ಬಹುತೇಕ ಬಗೆಹರಿದಿರುವುದ ರಿಂದ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದೆ. ಹಣಕಾಸು ವರ್ಷದ ಕೊನೆಯ 2 ತಿಂಗಳಲ್ಲಿ ತೆರಿಗೆ ಸಂಗ್ರಹ ಮತ್ತಷ್ಟು ಸುಧಾರಣೆ ಕಾಣುವ ಸಾಧ್ಯತೆ ಇದೆ. ಜಿಎಸ್ ಟಿಯಿಂದ ರಾಜ್ಯದ ವರಮಾನಕ್ಕಾಗುವ ನಷ್ಟವನ್ನು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ (ವಾರ್ಷಿಕ ಶೇ.15ರಷ್ಟು ಪ್ರಮಾಣದಲ್ಲಿ ತೆರಿಗೆ ಏರಿಕೆ ಅಂದಾಜಿನಂತೆ) ನೀಡಿದರೆ ವರ್ಷಾಂತ್ಯಕ್ಕೆ ತೆರಿಗೆ ಸಂಗ್ರಹ ಗುರಿ 89,957 ಕೋಟಿ ರೂ.ಗಳನ್ನು ಮೀರಬಹುದು ಎಂದು ಅಂದಾಜು ಮಾಡಲಾಗಿದೆ. ಮುಖ್ಯಮಂತಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಮಂಡಿಸುತ್ತಿರುವ 13ನೇ ಮುಂಗಡಪತ್ರ ಇದಾಗಿದೆ. ಆ ಮೂಲಕ ಅವರು ಮಾಜಿ ಮುಖ್ಯಮಂತಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಸರಿಗಟ್ಟಲಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ 6 ಬಾರಿ ಹಾಗೂ ವೀರೇಂದ ಪಾಟೀಲ್ ಮತ್ತು ಎಸ್.ನಿಜಲಿಂಗಪ್ಪ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ 7 ಬಾರಿ ಮುಂಗಡ ಪತ್ರ ಮಂಡಿಸಿದ್ದರು. ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಧರ್ಮಸಿಂಗ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ 8 ಬಾರಿ ಮುಂಗಡಪತ್ರ ಮಂಡಿಸಿದ್ದ ಸಿದ್ದರಾಮಯ್ಯ ಅವರು, ಮುಖ್ಯಮಂತಿಯಾಗಿ 5ನೇ ಬಜೆಟ್ ಮಂಡಿಸಲಿದ್ದಾರೆ.
Comments