ತಮ್ಮ ಮದುವೆ ಬಗ್ಗೆ ರಾಹುಲ್ ಗಾಂಧಿ ಏನಂದ್ರು ಗೊತ್ತಾ ?
ಎಲ್ಲರಿಗೂ ಪ್ರಶ್ನೆಯಾಗಿಯೇ ಉಳಿದಿರುವ ರಾಹುಲ್ ಗಾಂಧಿ ಮದುವೆ ಯಾವಾಗ ಅನ್ನೋದು ಈ ಬಗ್ಗೆ ರಾಹುಲ್ ಏನು ಹೇಳಿದ್ದಾರೆ ಗೊತ್ತಾ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮದುವೆ ಬಗ್ಗೆ ಕಲಬುರಗಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವಕನೊಬ್ಬ ಪ್ರಸ್ತಾಪ ಮಾಡಿದ್ದಾನೆ.
ರಾಜ್ಯ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಕಲಬುರಗಿಯ ಎಚ್.ಕೆಇ ಸಂಸ್ಥೆ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಸಂವಾದ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಯುವಕನೊಬ್ಬ ರಾಹುಲ್ ಜೀ ಯಾವಗ ಮದುವೆ ಆಗ್ತೀರಿ ಎಂದು ಪ್ರಶ್ನೆ ಕೇಳಿದ್ದಾನೆ. ಇ ವೇಳೆ ರಾಹುಲ್ ಗಾಂಧಿ ಥ್ಯಾಂಕು ವೆರೀ ಮಚ್ ಎಂದು ಪ್ರತಿಕ್ರಿಯಿಸಿ ಸುಮ್ಮನಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೊದಲೇ ನಿಗದಿಯಾದಂತೆ 7 ಪ್ರಶ್ನೆಗಳನ್ನು ಮಾತ್ರ ಕೇಳಲಾಗಿತ್ತು. ಈಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ ಮದುವೆ ಪ್ರಸ್ತಾಪ ಬಂದಾಗ ಉತ್ತರಿಸಲು ನಿರಾಕರಿಸಿದ್ದಾರೆ.
Comments