ಜೆಡಿಎಸ್ ಬ್ರಹ್ಮಾಸ್ತ್ರ ಕಂಡು ದಿಗ್ಬ್ರಮೆಗೊಂಡ ವಿಪಕ್ಷಗಳು
ರಾಷ್ಟೀಯ ಪಕ್ಷಗಳೂ ತಮ್ಮ ಬಲ ಪ್ರದರ್ಶನ ಮಾಡಲೆಂದು ಹಲವಾರು ರ‍್ಯಾಲಿಗಳನ್ನೂ ನಡೆಸುತ್ತವೆ. ಈ ಹಿಂದೆ ಬಿಜೆಪಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಅಮಿತ್ ಶಾ ಕಾರ್ಯಕ್ರಮದಲ್ಲಿ ಜನರ ಪ್ರತಿಕ್ರಿಯೆ ಕಂಡು ಬೇಸರ ವ್ಯೆಕ್ತ ಪಡಿಸಿದರು. ಆದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಜನರನ್ನು ಕಂಡು ರಾಷ್ಟೀಯ ಪಕ್ಷಗಳು ಜೆಡಿಎಸ್ ಬ್ರಹ್ಮಾಸ್ತ್ರದ ಬಲಕ್ಕೆ ದಿಗ್ಭ್ರಮೆಗೊಂಡಿವೆ.
ಇದೇ 17ರಂದು ಯಲಹಂಕದಲ್ಲಿ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಇಲ್ಲಿ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಚ್ರೀಯ ಪಕ್ಷಗಳು ಆಯೋಜಿಸುವ ಮೆಗಾ ರ‍್ಯಾಲಿಗಳಲ್ಲಿ 2ರಿಂದ 3 ಲಕ್ಷ ಜನರು ಆಗಮಿಸುತ್ತಾರೆ. ನಮ್ಮ ರ‍್ಯಾಲಿ ಗಳಲ್ಲಿ ಕನಿಷ್ಠ 10 ಲಕ್ಷ ಜನ ಸೇರಲಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಪಕ್ಕದಲ್ಲಿ 100 ಎಕರೆ ಜಮೀನಿನಲ್ಲಿ ಜೆಡಿಎಸ್ ರ‍್ಯಾಲಿ ನಡೆಯಲಿದೆ. ನಗರದೊಳಗೆ ಮಾಡಿದರೆ ಸಂಚಾರದಟ್ಟೆಯುಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ನಗರದ ಹೊರವಲಯದಲ್ಲಿ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಜೆಡಿಎಸ್ ವತಿಯಿಂದ 100 ಎಲ್ ಸಿಡಿ ಪ್ರಚಾರ ವಾಹನ ಉದ್ಘಾಟನೆಗೊಳ್ಳಲಿದೆ. ರ‍್ಯಾಲಿ ಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ 140 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಿದೆ.
Comments