ರಾಯಚೂರಿನ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡಕ್ಕೆ ಮನಸೋತ ರಾಹುಲ್ ಗಾಂಧಿ

ರಾಯಚೂರಿನ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡಕ್ಕೆ ಮನಸೋತ ರಾಹುಲ್ ಗಾಂಧಿ ರಾಯಚೂರಿನಲ್ಲಿ ಭರ್ಜರಿ ರೋಡ್ ಶೋ ಹಮ್ಮಿಕೊಂಡಿದ್ದರು. ರಾಯಚೂರಿನಲ್ಲಿ ಅವರಿಗೆ ಹೂಮಳೆ ಸುರಿಸಿ ಸ್ವಾಗತ ನೀಡಲಾಯಿತು.
ಇದೇ ವೇಳೆ ರಾಯಚೂರಿನ ಕಲ್ಮಲದಲ್ಲಿ ರಾಹುಲ್ ಗಾಂಧಿ ಏಕಾಏಕಿ ರಸ್ತೆ ಬದಿಯ ಡಾಬಾವೊಂದಕ್ಕೆ ತೆರಳಿದ ರಾಹುಲ್ ಗಾಂಧಿ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡ, ಬಜ್ಜಿ, ಪಕೋಡಾ ತಿಂದು, ಚಹಾ ಕುಡಿದ ಬಳಿಕ ಬಜ್ಜಿ ತಿಂದು ತೃಪ್ತಿವ್ಯಕ್ತಪಡಿಸಿದ ರಾಹುಲ್, ದಿನಕ್ಕೆ ಎಷ್ಟು ವ್ಯಾಪಾರವಾಗುತ್ತದೆ ಎಂದು ಡಾಬಾ ಮಾಲಿಕರನ್ನು ಕೇಳಿದರು. 2000ರೂ. ನೋಟನ್ನು ನೀಡಿ ನಿರ್ಗಮಿಸಿದರು. ರಾಹುಲ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಾಥ್ ನೀಡಿದರು. ಇದಕ್ಕೆ ಮೊದಲು ರಾಹುಲ್ ರಾಯಚೂರಿನ ಶಂಶಾಲಂ ದರ್ಗಾಕ್ಕೆ ದಿಢೀರ್ ಭೇಟಿ ನೀಡಿದರು. ರೋಡ್ ಶೋ ವೇಳೆ ಅಭಿಮಾನಿಗಳು ತಾಮ್ರದ ಗದೆಯೊಂದನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು. ''ಚೀನಾ ದೇಶದ ಜೊತೆ ನಮಗೆ ಹಲವು ಕ್ಷೇತ್ರಗಳಲ್ಲಿ ಪೈಪೋಟಿಯಿದೆ. ಉದ್ಯೋಗ ಸೃಷ್ಟಿಯಲ್ಲಿ ಚೀನಾ ನಮಗಿಂತ ಮುಂದಿದೆ''ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
Comments