ಎಚ್ ಡಿಡಿ ರಾಜಕೀಯ ಚಕ್ರವ್ಯೂಹಕ್ಕೆ ಸಿಲುಕೊಂಡ ಸಿಎಂ ಸಿದ್ದರಾಮಯ್ಯ..!!

ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನ್ನು ಮಟ್ಟ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್ ನಡೆಸುತ್ತಿದೆ. ಈ ಭಾರಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ತವಕದಲ್ಲಿರುವ ಜೆಡಿಎಸ್ ತಂತ್ರ ರೂಪಿಸಿದೆ. ಸಿಎಂ ಸಿದ್ದರಾಮಯ್ಯನವರ ಸರ್ವಾಧಿಕಾರತ್ವಕ್ಕೆ ಬ್ರೇಕ್ ಹಾಕಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪಣತೊಟ್ಟಿದ್ದಾರೆ.
ಅಲ್ಲದೆ ರಾಜಕೀಯ ಚಾಣಾಕ್ಷತನದಿಂದ ಸಿದ್ದರಾಮಯ್ಯನವರಿಗೆ ಮಣ್ಣು ಮುಕ್ಕಿಸಲು ಎಚ್ ಡಿಡಿ ಸಿದ್ದರಾಗಿದ್ದಾರೆ. ಒಕ್ಕಲಿಗ-ದಲಿತ ಸಮುದಾಯಗಳ ಜಾತಿ ಸಮೀಕರಣವಾದರೆ, ಸ್ವತಃ ಸಿಎಂ ಸಿದ್ದರಾಮಯ್ಯನವರಿಗೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಾಗಬಹುದು. ಹೌದು ದಾಟಿತರಾ ಕೆಂಗಣ್ಣಿಗೆ ಗುರಿಯಾಗಿರುವ ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಲಕ್ಷಣ ಎದ್ದು ಕಾಣುತ್ತಿದೆ. ಒಕ್ಕಲಿಗ ಪ್ರಾಬಲ್ಯವಿರುವ ಚಾಮುಂಡೇಶ್ವರಿಯಲ್ಲಿ ಶೇಕಡಾ 10 ರಿಂದ 20 ರಷ್ಟು ದಲಿತ ಮತಗಳು ಜೆಡಿಎಸ್ ಪರವಾದರೂ, ತಮ್ಮ ಹಳೆಯ ಸ್ನೇಹಿತ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಪರಾಭವಗೊಳ್ಳಬಹುದು.
ಕಳೆದ ನವೆಂಬರ್ ತಿಂಗಳಲ್ಲೇ ಕುಮಾರಪರ್ವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಎದುರಿಗೆ ರಣಕಹಳೆ ಊದಿರುವ ಜಿ.ಟಿ.ಡಿ., ಬಿಎಸ್ಪಿ ಯೊಂದಿಗಿನ ಮೈತ್ರಿಯಿಂದ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಂತಿದೆ. ವರುಣಾದಲ್ಲಿ ಒಂದಷ್ಟು ದಲಿತ ಸಮುದಾಯದ ಮತಗಳು ಜೆಡಿಎಸ್ ಗೆ ವರ್ಗವಾದರೆ, ಡಾ.ಯತೀಂದ್ರ ಹಾಗು ಕಾಪು ಸಿದ್ದಲಿಂಗ ಸ್ವಾಮಿ ನಡುವಿನ ಹೋರಾಟ ಮತ್ತಷ್ಟು ರಂಗೇರಲಿದೆ. ಇದೆಲ್ಲದರ ಲೆಕ್ಕಾಚಾರದಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾದಿಂದ ಚಾಮುಂಡೇಶ್ವರಿಗೆ ಕ್ಷೇತ್ರ ಬದಲಾವಣೆಯ ಸಾಹಸಕ್ಕೆ ಕೈ ಹಾಕದೆ ಇರವು ಸಾಧ್ಯತೆಯೇ ಹೆಚ್ಚಿದೆ.
Comments