ದೇವೇಗೌಡ್ರ ರಾಜಕೀಯ ಚಾಣಾಕ್ಷತಕ್ಕೆ ಬೆರಗಾದ ವಿರೋಧ ಪಕ್ಷಗಳು..!!

2018 ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣನೆಯ ಕಾವು ಮುಗಿಲು ಮುಟ್ಟುತ್ತಿದೆ. ತಮ್ಮ ವಿರೋಧ ಪಕ್ಷಗಳನ್ನು ಸಾಡೆ ಬಡಿಯಲು ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಮಣ್ಣು ಮುಕ್ಕಿಸಲು ಜೆಡಿಎಸ್ ಸಜ್ಜಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ದಾಳದಲ್ಲಿ ವಿರೋಧ ಪಕ್ಷಗಳು ಹುರುಳಿ ಬೀಳುವ ಸೂಚನೆಗಳು ಕಾಣುತ್ತಿವೆ.
ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಮಾಯವತಿಯವರ ಬಹುಜನ ಸಮಾಜ ಪಕ್ಷದೊಂದಿಗಿನ ಸೀಟು ಹಂಚಿಕೆಯ ಹೊಂದಾಣಿಕೆ ಮಾಡಿಕೊಂಡಿರುವ ದೇವೇಗೌಡರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಪಣ ತೊಟ್ಟಂತೆ ಕಾಣುತ್ತಿದೆ. ಒಕ್ಕಲಿಗ-ದಲಿತ ಜಾತಿ ಸಮೀಕರಣ ಜೆಡಿಎಸ್ ಗೆ ಲಾಭವಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಇಳಿವಯಸ್ಸಿನಲ್ಲಿಯೂ ವಾರದಲ್ಲಿ ಎರಡೆರಡು ಬಾರಿ ದೆಹಲಿಗೆ ತೆರಳಿ ಇಂತಹ ಮೈತ್ರಿಗೆ ಅಂಕಿತ ಹಾಕಿ ಬಂದರು ದೊಡ್ಡಗೌಡರು. ಸರಿಯಾದ ಕಾರ್ಯತಂತ್ರ ಹೆಣೆದು, ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟು, ಮಾಯಾವತಿಯವರ ಖ್ಯಾತಿಯನ್ನು ಆಯಕಟ್ಟಿನ ಕ್ಷೇತ್ರಗಳ ಪ್ರಚಾರದಲ್ಲಿ ಬಳಸಿಕೊಂಡರೆ 25 ಹೆಚ್ಚು ಕ್ಷೇತ್ರಗಳನ್ನು ಜೆಡಿಎಸ್ ಹೆಚ್ಚಿಸಿಕೊಳ್ಳಬಹುದು.
ಜೆಡಿಎಸ್ ವಿಚಾರಕ್ಕೆ ಬರುವುದಾದರೆ, ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ದೂರ ಉಳಿದಿರುವ ಕುಮಾರಸ್ವಾಮಿಗೆ ಇದು ಗೆಲ್ಲಲೇಬೇಕಾದ ಚುನಾವಣೆಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿಯೂ ಸಹ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿರುವುದು. ಜೆಡಿಎಸ್ ನ ಆತ್ಮ ಬಲ ಹೆಚ್ಚಾದಂತೆ ಕಾಣುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಜಾತ್ಯತೀತ ಜನತಾದಳ, ಉತ್ತರ ಪ್ರದೇಶದ ಈಗಾಗಲೇ ಘೋಷಿಸಿರುವಂತೆ 20 ಕ್ಷೇತ್ರಗಳಲ್ಲಿ ಬಿಎಸ್ಪಿ ಹಾಗು ಇನ್ನುಳಿದ 204 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ದಿಸಲಿದೆ.
Comments