ಚುನಾವಣೆಯ ಬಗ್ಗೆ ಯುವಕರಿಗೆ ಕಿಚ್ಚನ ಕಿವಿ ಮಾತು..!

10 Feb 2018 6:02 PM | Politics
777 Report

ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಒಂದೆಡೆಯಾದರೆ ಮತ್ತೊಂದೆಡೆ ವಿಪಕ್ಷಗಳನ್ನು ಮಣಿಸುವ ಬಗ್ಗೆ ಚಿಂತನೆ ನಡೆಸುತ್ತಿರುತ್ತವೆ. ಅಷ್ಟೇ ಅಲ್ಲದೆ ಸ್ಟಾರ್ ನಟರು ಚುನಾವಣಾ ಅಖಾಡಕ್ಕೆ ಧುಮುಕಲು ಸಿದ್ಧರಾಗುತ್ತಾರೆ. ಕಿಚ್ಚ ಸುದೀಪ್ ಚುನಾವಣೆಯ ಬಗ್ಗೆ ಅಭಿಮಾನಿಗಳೊಂದಿಗೆ ಕೆಲ ವಿಚಾರಗಳನ್ನು ಹಚ್ಚಿಕೊಳ್ಳುವುದರ ಮೂಲಕ ಯುವಕರಿಗೆ ಸಲಹೆ ನೀಡಿದ್ದಾರೆ. ಯುವಕರು ದೇಶದ ಆಸ್ತಿ ,ಆದರಿಂದ ನೀವು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ತುಂಬಾ ಅತ್ಯಗತ್ಯ.

ನಿಮ್ಮ ಒಂದು ಮತ ಒಬ್ಬ ಒಳ್ಳೆಯ ನಾಯಕನಿಗೆ ಮೀಸಲಿರಿಸಿದರೆ ರಾಜ್ಯದ ಬೆಳವಣಿಗೆ ಸಾಧ್ಯವಾಗುತ್ತದೆ. ಅಲ್ಲದೆ ಭ್ರಷ್ಟ್ಟಾಚಾರವನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಆದುದರಿಂದ ಎಲ್ಲರು ಸಹ ಮತದಾನದ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಿ. 18 ವರ್ಷ ವಯೋಮಿತಿಯವರು ತಪ್ಪದೆ ಮತದಾನದ ಗುರುತಿನ ಚೀಟಿಯನ್ನು ಮಾಡಿಸಿಕೊಂಡು, ನಿಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ನಿಮ್ಮ ಮತದಾನವೇ ನಿರ್ಣಾಯಕ . ಮತದಾರರಾಗಿ ನೊಂದಾಯಿಸಿಕೊಳ್ಳಿ ಎಂದು ಬಿ-ಪ್ಯಾಕ್ ಎಂಬ ಸಂಸ್ಥೆ ಅಭಿಯಾನ ಆರಂಭಿಸಿದೆ ಎಂದು ಕಿಚ್ಚ ಯುವಕರಿಗೆ ಸಲಹೆಯನ್ನು ನೀಡಿದ್ದಾರೆ.

Edited By

Shruthi G

Reported By

Madhu shree

Comments