ಕುಮಾರಣ್ಣ ನನ್ನ ಮೇಲೆ ಹಲ್ಲೆ ಮಾಡಿಲ್ಲ: ಅನ್ನದಾನಿ ಸ್ಪಷ್ಟನೆ

ಮಾಜಿ ಮುಖ್ಯಮಂತ್ರಿ ಹಾಗೂ ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಾ ಕಿರುಗಾವಲಿಗೆ ಬಂದಾಗ ಸಾವಿರಾರು ಕಾರ್ಯಕರ್ತರು ಹೋಬಳಿ ಜಾ.ದಳ ಕಚೇರಿ ಉದ್ಘಾಟಿಸುವಂತೆ ಆಗ್ರಹಿಸಿದರು. ಆಗ ಕುಮಾರಸ್ವಾಮಿ ಅವರು ಮುಂದಿನ ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಿ ನಂತರ ವಾಪಸ್ ಬಂದು ಉದ್ಘಾಟಿಸುತ್ತೇನೆ ಎಂದು ಮನವಿ ಮಾಡಿದರು. ಆಗ ಕಾರ್ಯಕರ್ತರು ಬಸ್ ತಡೆವೊಡ್ಡಿದರು. ಆಗ ಕುಮಾರಸ್ವಾಮಿ ಅವರು ನನಗೆ ಮೈಕ್ ತೆಗೆದುಕೊಂಡು ಹೋಗಿ ಮಾತನಾಡು ಎಂದು ಹೇಳಿದರು. ಅದನ್ನೇ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಹಾಗೂ ನನ್ನ ನಡುವೆ ಅಣ್ಣ ತಮ್ಮಂದಿರ ಸಂಬಂಧವಿದೆ. , ಜೆಡಿಎಸ್ ನಲ್ಲಿ ಏಕವಚನದಿಂದ ಸಲುಗೆಯಿಂದ ಪ್ರೀತಿ, ವಿಶ್ವಾಸದಿಂದ ಕರೆಸಿಕೊಳ್ಳುವ ಏಕೈಕ ವ್ಯಕ್ತಿ ನಾನೊಬ್ಬನೇ. ಅಷ್ಟರ ಮಟ್ಟಿಗೆ ನಮ್ಮ ಅವರ ನಡುವೆ ಸಂಬಂಧವಿದೆ. ನನಗೆ ರಾಜಕೀಯ ಜನ್ಮ ನೀಡಿದ್ದೇ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ತಿಳಿಸಿದರು.ಕೆಲವು ಕಿಡಿಗೇಡಿಗಳು ನನಗೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜ್ಯಾತ್ಯಾತೀತ ಜನತಾದಳದ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ನವೀನ್‍ಕುಮಾರ್, ಎಸ್.ಡಿ.ಜಯರಾಮು, ಅರುಣಜ್ಯೋತಿ ಇತರರು ಹಾಜರಿದ್ದರು.
Comments