ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ : ಎಚ್ ಡಿಕೆ ವ್ಯಂಗ್ಯ



ಯಶವಂಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾ ವೈಖರಿಯ ಬಗ್ಗೆ ತರಾಟೆಗೆ ತೆಗೆದು ಕೊಂಡರು ಯಾರದ್ದೋ ದುಡ್ಡಿನಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ,ವೆಂದು ಖಜಾನೆಯ ಧನವನ್ನು ಲೂಟಿಕೋರ ಇಷ್ಟೇ ಸಾಲದು ಅನ್ನುವುದಕ್ಕೆ ನಾನು ರಾಜ್ಯವನ್ನು ಹಸಿವು ಮುಕ್ತ ರಾಜಯವನ್ನಾಗಿಸಿದ್ದೇನೆ ಎಂದು ಬೀಗುತ್ತಿದ್ದಾರೆ.
ತಾವು ಅಧಿಕಾರಕ್ಕೆ ಬಂದ ತಕ್ಷಣ ಉಚಿತವಾಗಿ ಅನ್ನಭಾಗ್ಯ ಯೋಜನೆ ಮಾಡಿದ್ದೀರಿ ಯಾರ ಹಣದಲ್ಲಿ ನೀವು ರಾಜ್ಯವನ್ನು ಹಸಿವು ಮುಕ್ತ ಗೊಳಿಸಿದ್ದೀರಿ,ರಾಜ್ಯದ ಬೊಕ್ಕಸದ್ ಹಣವನ್ನು ಬಳಸಿದ್ದೀರೇ ವಿನಃ ತಮ್ಮ ಸ್ವಂತ ಖರ್ಚಿನಲ್ಲಿ ಏನು ಮಾಡುತ್ತಿಲ್ಲವಲ್ಲ? ಎಂದು ಎಚ್ ಡಿಕೆ ಹರಿಹಾಯ್ದರು. ಈ ರಾಜ್ಯ ಸರ್ಕಾರ ಕಡಿಮೆ ಮಾಡಿರುವುದು ಕೇವಲ 48 ರೂ. ಮಾತ್ರ. ಆದರೆ 84 ರೂ.ಗಳ ಪ್ರಚಾರ ಪಡೆಯುತ್ತಿದ್ದಾರೆ. ಇವರೇನೊ 100 ರೂ. ಕಡಿಮೆ ಮಾಡಿ ಅನ್ನಭಾಗ್ಯ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ ಎಂದು ವ್ಯಂಗ್ಯವಾಡಿದರು. ಜಾಹಿರಾತಿಗೆ ನೀಡುವ ಹಣವನ್ನು ಆತ್ಮಹತ್ಯೆ ಗೆ ಶರಣಾಗುತ್ತಿರುವ ರೈತರಿಗೆ ನಿದ್ದಬಹುದ್ದಿತ್ತು ಅದರ ಬದಲು ತಮ್ಮ ಸರ್ಕಾರದ ಅಲ್ಪ ಕಾರ್ಯವನ್ನು ಮಹಾ ಕಾರ್ಯವೆಂದು ಬಿಂಬಿಸಲು ಆ ಹಣವನ್ನು ಜಾಹಿರಾತಿಗೆ ಸುರಿದಿರಿ. ನೀವು ಅಧಿಕಾರಕ್ಕೆ ಬಂದನಂತರದಿಂದ ರಾಜ್ಯದಲ್ಲಿ ಕೋಮುಗಲಭೆ, ಕೊಲೆ ಪ್ರಕರಣಗಳು ಹೆಚ್ಚಿವೆ. ಇದಾವುದೇ ಸಮಸ್ಯೆಯನ್ನು ಬಗೆಹರಿಸದೆ ತಮ್ಮ ಸರ್ಕಾರದ ಬಗ್ಗೆ ಕೊಂಡಾಡುತ್ತಿದ್ದೀರಲ್ಲವೇ ? ಎಂದು ಸಿಎಂ ಸಿದ್ದರಾಮಯ್ಯನವರನ್ನು ಹಿಯಾಗೆಳೆದರು.
Comments