ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್

10 Feb 2018 3:57 PM | Politics
1587 Report

ಕುರುಬ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯನವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಹಿಂದುಳಿದ ವರ್ಗದ ಮುಖಂಡ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರಿಂದ ಯಾವುದೇ ಆರ್ಥಿಕ ಬೆಂಬಲ ನೀಡಿಲ್ಲ. ಕುರುಬರಿಗೂ ಯಾವುದೇ ಸಹಾಯ ಮಾಡಿಲ್ಲ. ಅಹಿಂದ ವರ್ಗ ನಿಮ್ಮಿಂದ ದೂರವಾಗುತ್ತಿದೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.ರಾಷ್ಟ್ರೀಯ ಪಕ್ಷಗಳು ಅಹಿಂದ ನಾಯಕರ ಧ್ವನಿ ಅಡಗಿಸಿವೆ. ಬಿಜೆಪಿ ಸಂಗೊಳ್ಳಿ ರಾಯಣ್ಣ ರಾಯಣ್ಣ ಸಂಘಟನೆಯ ಧ್ವನಿ ಅಡಗಿಸಿದೆ. ಅಹಿಂದ ಎನ್ನುವ ಸೊಲ್ಲು ತಾವು ಕಾಂಗ್ರೆಸ್ ಗೆ ಬಂದ ಮೇಲೆ ಅಡಗಿ ಹೋಗಿದೆ. ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮಿಂದ ಯಾವ ಉಪಕಾರ ಆಯ್ತು? ಕುರುಬ ಸಮುದಾಯ ಈಗ ನಿಮ್ಮಿಂದ ವಿಮುಖವಾಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಕಿಡಿಕಾರಿದರು.ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ದೇವೇಗೌಡರು ಸಿಎಂ ಆಗಿದ್ದಾಗ ಬಹುತೇಕ ಖಾತೆಗಳನ್ನು ಹಿಂದುಳಿದ ವರ್ಗಗಳ ಮುಖಂಡರಿಗೆ ನೀಡಿದ್ದರು. ಫೆ.23ರಿಂದ ಹಿಂದುಳಿದ ವರ್ಗಗಳ ನಾಯಕರು ಪ್ರವಾಸ ಮಾಡಲಿದ್ದೇವೆ. ಫೆ.23ರಂದು ಶಿವಮೊಗ್ಗ, ಫೆ.24 ಮೈಸೂರು, 25 ಬೆಂಗಳೂರು, 26 ಬೀದರ್, 28 ರಂದು ಹಿಂದುಳಿದ ವರ್ಗಗಳ ಸಮಾವೇಶಗಳು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Edited By

Shruthi G

Reported By

Shruthi G

Comments