ಚುನಾವಣೆಯಲ್ಲಿ ಕುಮಾರಣ್ಣ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ? ಎಚ್ ಡಿಡಿ ಸುಳಿವು

ಮುಂಬರುವ ಚುನಾವಣಾ ಸಿದ್ಧತೆಯಲ್ಲಿರುವ ಎಚ್ ಡಿ ಕುಮಾರಸ್ವಾಮಿ ಯವರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದರ ಬಗ್ಗೆ ಈ ಗಗಳೇ ಹಲವು ಬರಿ ಹೇಳಿದ್ದಾರೆ. ಆದರೆ ಜನರ ಅಭಿಮತಕ್ಕೆ ಓ ಗೊಡುತ್ತಿರುವ ಎಚ್ ಡಿ ದೇವೇಗೌಡ್ರು ಎಚ್ ಡಿಕೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಚ್ ಡಿ ದೇವೇಗೌಡರು, ದೇವರ ಹಿಪ್ಪರಗಿಯ ಜನತೆ ತಮ್ಮ ಕ್ಷೇತ್ರ ದಿಂದ ಸ್ಪರ್ಧಿಸಬೇಕೆಂದು ಇಲ್ಲಿನ ಜನತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಅದಕ್ಕೆ ನಾನು ಅಭಾರಿ. ಕುಮಾರಸ್ವಾಮಿ ಎರಡೂ ಕಡೆ ಸ್ಪರ್ಧಿಸಬಾರದು ಎಂದೇನೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು. ಈ ಮೂಲಕ ರಾಮನಗರ ಹಾಗೂ ದೇವರ ಹಿಪ್ಪರಗಿಯಿಂದ ಎಚ್ ಡಿಕೆ ಸ್ಪರ್ಧಿಸಬಹುದೆಂಬ ಸುಳಿವು ನೀಡಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.ಬಿಎಸ್ಪಿ ಜತೆಗಿನ ಮೈತ್ರಿ ಬಗ್ಗೆ ಅವರು ಪ್ರತಿಕ್ರಿಯಿಸಿ, ಪ್ರಾದೇಶಿಕ ಪಕ್ಷವನ್ನೇ ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಹಾಗೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯನ್ನು ಹೊರಹಾಕುವ ಸಂಕಲ್ಪ ಮಾಡಿಕೊಂಡು ಮೈತ್ರಿಗೆ ಒಪ್ಪಿದ್ದೇವೆ ಎಂದರು. ಬಿಎಸ್ಪಿಗೆ 20 ಸೀಟುಗಳು ಅಂತಿಮಗೊಂಡಿವೆ. ಉಳಿದ 204 ಸೀಟುಗಳಲ್ಲಿ ಕೆಲವನ್ನು ಎಡಪಂಥೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಮಾಲೋಚಿಸಲಾಗುತ್ತಿದೆ. ಬಿಎಸ್ಪಿ ಕೇವಲ ದಲಿತರ ಪಕ್ಷ ಅಲ್ಲ. ದಲಿತ ವೋಟುಗಳ ಬೆಂಬಲ ಇಲ್ಲದಿದ್ದರೂ, ನಾನು ಸರ್ಕಾರ ಮಾಡಿ ತೋರಿಸಿದ್ದೇನೆ ಎಂದರು.
Comments