ಬಿಜೆಪಿಯ ಮತ್ತೊಂದು ವಿಕೆಟ್ ಜೆಡಿಎಸ್ ಪಾಲು..!!

10 Feb 2018 10:30 AM | Politics
8544 Report

ರಾಯಚೂರಿನಲ್ಲಿ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿ ಸದಸ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅವರು ಜೆಡಿಎಸ್ ಸೇರಲಿದ್ದು, ದೇವದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಹೌದು..,ದೇವದುರ್ಗದ ಕ್ಯಾದಿಗೇರಾ ಕ್ಷೇತ್ರದ ಬಿಜೆಪಿ ಜಿಪಂ ಸದಸ್ಯ ವೆಂಕಟೇಶ್ ಪೂಜಾರಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ವೆಂಕಟೇಶ್ ಪೂಜಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ‌ ವೀರಲಕ್ಷ್ಮಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ದೇವದುರ್ಗ ವಿದಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಟಿಕೆಟ್ ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ವೆಂಕಟೇಶ್ ಪೂಜಾರಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೆ ವೆಂಕಟೇಶ್ ಪೂಜಾರಿ ಜೆಡಿಎಸ್ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ದೇವದುರ್ಗ ಕ್ಷೇತ್ರದಲ್ಲಿ ತಮ್ಮ ಬಾಮೈದ ಹಾಗೂ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ್ ವೆಂಕಟೇಶ್ ಎದುರು ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.

Edited By

Shruthi G

Reported By

Shruthi G

Comments